ಪೊಲೀಸ್ ವಶಕ್ಕೆ ಶಿರೂರು ಶ್ರೀ ಆಪ್ತ ಮಹಿಳೆ

https://static.asianetnews.com/images/authors/b348a094-0bef-5801-a1f6-61e57071185f.jpg
First Published 21, Jul 2018, 7:54 AM IST
Lady Arrested Who Was Close To Shiroor Shri
Highlights

ಶಿರೂರು ಶ್ರೀಗಳು ಪುಂಡಾಟಿಕೆ ಇದ್ದು, ಮದ್ಯಪಾನವನ್ನೂ ಮಾಡುತ್ತಿದ್ದರು, ಅಲ್ಲದೇ ಅವರಿಗೆ ಹೆಂಗಸರ ಸಹವಾಸ ಇತ್ತು ಎಂದು ಪೇಜಾವರ ಶ್ರೀಗಳು ಹೇಳಿದ್ದು, ಇದೀಗ ಶ್ರೀಗಳೀಗೆ ಆಪ್ತರಾಗಿದ್ದ ಮಹಿಳೆಯೋರ್ವರನ್ನು ವಶಕ್ಕೆ ಪಡೆಯಲಾಗಿದೆ. 

ಉಡುಪಿ: ಶಿರೂರು ಶ್ರೀಗಳ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಅವರಿಗೆ ಇತ್ತೀಚೆಗೆ ಆಪ್ತರಾಗಿದ್ದ ಕಾರ್ಕಳದ ಮಹಿಳೆಯೊಬ್ಬರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ. 

ಮಹಿಳೆಯ ಜತೆಗೆ ಆಕೆಯ ಕಾರನ್ನೂ ವಶಕ್ಕೆ ತೆಗೆದುಕೊಳ್ಳಲಾಗಿದ್ದು, ಈ ಕಾರನ್ನು ಸ್ವಾಮೀಜಿ ಅವರೇ ನೀಡಿದ್ದರು. ಆಕೆ ಶಿರೂರು ಶ್ರೀಗಳಿಗೆ ಇದೇ ಕಾರಿನಲ್ಲಿ ಆಹಾರ ಕಳುಹಿಸಿಕೊಡುತ್ತಿದ್ದಳು ಅಥವಾ ತಾನೇ ಡ್ರೈವ್ ಮಾಡಿಕೊಂಡು ಆಹಾರ ತಂದುಕೊಡುತ್ತಿದ್ದಳು ಎಂಬ ಮಾಹಿತಿ ಇದೆ. ಈ ಹಿನ್ನೆಲೆಯಲ್ಲೇ ಪೊಲೀಸರು ಆಕೆಯ ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಆದರೆ, ಪೊಲೀಸರು ಮಾತ್ರ ಈ ಕುರಿತು ಯಾವುದೇ ಮಾಹಿತಿ ನೀಡುತ್ತಿಲ್ಲ.

ಶಿರೂರು ಶ್ರೀಗೆ ಹೆಂಗಸರ ಸಹವಾಸ, ಮದ್ಯ ಸೇವನೆ ವ್ಯಸನ, ಪುಂಡಾಟಿಕೆ

ಲಕ್ಷ್ಮೀವರ ತೀರ್ಥ ಸ್ವಾಮೀಜಿಗೆ ಮೊದಲಿನಿಂದಲೂ ಅನಾರೋಗ್ಯವಿತ್ತು. ಅವರು ವಿಪರೀತ ಮದ್ಯಪಾನ ಮಾಡುತ್ತಿದ್ದರು. ಪುಂಡಾಟಿಕೆ ನಡೆಸಿ ಬೆದರಿಕೆ ಒಡ್ಡಿದ ಪ್ರಕರಣಗಳೂ ಅವರ ವಿರುದ್ಧ ಇದ್ದವು. ಅವರಿಗೆ ಮೊದಲೇ ಒಬ್ಬರು ಮಹಿಳೆಯೊಂದಿಗೆ ಸಂಬಂಧ ಇತ್ತು. ಇತ್ತೀಚೆಗೆ ಇನ್ನೊಬ್ಬ ಮಹಿಳೆಯೊಂದಿಗೂ ಸಂಬಂಧ ಬೆಳೆದಿತ್ತು. ಈ ಇಬ್ಬರು ಮಹಿಳೆಯರ ಮಧ್ಯೆ ಜಗಳವಾಗಿದ್ದು, ಇವು ಅವರ ಸಾವಿಗೆ ಕಾರಣವಾಗಿರಬಹುದು. ಇದು ಕೊಲೆ ಎಂಬುದನ್ನು ನಾನು ಒಪ್ಪಲಾರೆ. ಅಷ್ಟಮಠಾಧೀಶರು ವಿಷಪ್ರಾಶನ ಮಾಡಿಸಿದ್ದಾರೆ ಎಂಬ ಆರೋಪವೇ ದೊಡ್ಡ ಅಪರಾಧ. ಆದರೂ, ಅಗತ್ಯವಿದ್ದರೆ ಯಾವುದೇ ರೀತಿಯ ತನಿಖೆಗೆ ನಾನು ಮತ್ತು ಅಷ್ಟಮಠಗಳು ಮುಕ್ತವಾಗಿದ್ದೇವೆ.

ವಿಶ್ವೇಶ ತೀರ್ಥ ಸ್ವಾಮೀಜಿ ಪೇಜಾವರ ಮಠಾಧೀಶ

loader