ಪದ್ಮಾವತಿ ಸಿನಿಮಾ ಪರ ಬಿಜೆಪಿ ಹಿರಿಯ ಮುಖಂಡ ಎಲ್​ ಕೆ ಅಡ್ವಾಣಿ ಬ್ಯಾಟಿಂಗ್ ಮಾಡಿದ್ದಾರೆ.  ಸಂಜಯ್ ಲೀಲಾ ಬನ್ಸಾಲಿಗೆ ಬೆಂಬಲ ಸೂಚಿಸಿದ ಎಲ್ ​ಕೆ ಆಡ್ವಾಣಿ ಅಪದ್ಮಾವತಿ ವಿಚಾರದಲ್ಲಿ ಸಮಿತಿ ಮೂಗು ತೂರಿಸುವ ಅಗತ್ಯ ಇಲ್ಲ ಎಂದ ಅಡ್ವಾಣಿ ಹೇಳಿದ್ದಾರೆ.

ಬೆಂಗಳೂರು (ಡಿ.01): ಪದ್ಮಾವತಿ ಸಿನಿಮಾ ಪರ ಬಿಜೆಪಿ ಹಿರಿಯ ಮುಖಂಡ ಎಲ್​ ಕೆ ಅಡ್ವಾಣಿ ಬ್ಯಾಟಿಂಗ್ ಮಾಡಿದ್ದಾರೆ. ಸಂಜಯ್ ಲೀಲಾ ಬನ್ಸಾಲಿಗೆ ಬೆಂಬಲ ಸೂಚಿಸಿದ ಎಲ್ ​ಕೆ ಆಡ್ವಾಣಿ ಅಪದ್ಮಾವತಿ ವಿಚಾರದಲ್ಲಿ ಸಮಿತಿ ಮೂಗು ತೂರಿಸುವ ಅಗತ್ಯ ಇಲ್ಲ ಎಂದ ಅಡ್ವಾಣಿ ಹೇಳಿದ್ದಾರೆ.

ನಿನ್ನೆ ಬಿಜೆಪಿ ಎಂಪಿ ಅನುರಾಗ್ ಟಾಕೂರ್ ಅಧ್ಯಕ್ಷತೆಯಲ್ಲಿ ನಡೆದ 30 ಜನರ ಸಂಸದೀಯ ಸಮಿತಿ ಸಭೆಯಲ್ಲಿ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಹಾಜರಾಗಿದ್ದರು. ಪ್ರಶ್ನೋತ್ತರ ವೇಳೆ, ಸೂಫಿ ಕವಿಯೊಬ್ಬರ ಕವಿತೆ ಆಧರಿಸಿ ಸಿನಿಮಾ ಮಾಡಲಾಗಿದೆ. ಈ ಸಿನಿಮಾದಲ್ಲಿ ರಾಣಿ ಪದ್ಮಾವತಿಗೆ ಕಳಂಕ ತರುವ ಯಾವುದೇ ದೃಶ್ಯವಿಲ್ಲ. ಯಾರ ಭಾವನೆಗಳಿಗೂ ನೋವಾಗುವಂತಹ ದೃಶ್ಯಗಳು ಈ ಸಿನಿಮಾದಲ್ಲಿಲ್ಲ ಎಂದ ಬನ್ಸಾಲಿ ಸ್ಪಷ್ಟೀಕರಣ ಕೊಟ್ಟಿದ್ದಾರೆ.

ಸೆನ್ಸಾರ್​'ಗೆ ಬರುವುದಕ್ಕೂ ಮೊದಲು ಆಯ್ದ ಕೆಲ ಮಾಧ್ಯಮ ಪ್ರತಿನಿಧಿಗಳಿಗೆ ಸಿನಿಮಾ ತೋರಿಸಿದ್ದಕ್ಕೆ ಸಮಿತಿ ಸದಸ್ಯರು ಬನ್ಸಾಲಿ ವಿರುದ್ಧ ಸಭೆಯಲ್ಲಿ ತೀವ್ರ ವಾಗ್ದಾಳಿ ನಡೆಸಿದರು.