ಕುಮಾರಸ್ವಾಮಿ ಗ್ರಾಮ ವಾಸ್ತವ್ಯಕ್ಕೆ ಮುಹೂರ್ತ ಫಿಕ್ಸ್: ನಿಮ್ಮೂರಿಗೆ ಯಾವಾಗ..?

 ಗ್ರಾಮ ವಾಸ್ತವ್ಯ ಮೂಲಕ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಹಿಂದೊಮ್ಮೆ ಸುದ್ದಿಯಾಗಿದ್ದರು. ಈಗ ತಮಗೆ ಜನಪ್ರಿಯತೆ ತಂದುಕೊಟ್ಟ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಪುನಃ ಆರಂಭಿಸಲು ಮುಂದಾಗಿದ್ದು, ಇದಕ್ಕೆ ಮುಹೂರ್ತ ಸಹ ಫಿಕ್ಸ್ ಆಗಿದೆ.

Kumaraswamy set to start Grama Vaastavya from  Uttara karnataka on June 21

ಬೆಂಗಳೂರು, [ಜೂನ್.03].: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ತಮ್ಮ ಹಳೆ ಗ್ರಾಮ ವಾಸ್ತವ್ಯವನ್ನು ಈಗ ಹೊಸ ರೂಪದಲ್ಲಿ ಉತ್ತರ ಕರ್ನಾಟಕ ಭಾಗದಿಂದ ಆರಂಭಿಸಲಿದ್ದಾರೆ.

ಜೂನ್ 21ರಂದು ಯಾದಗಿರಿ ಜಿಲ್ಲೆಯ ಗುರುಮಿಟ್ಕಲ್ ತಾಲ್ಲೂಕಿನಲ್ಲಿ ಹಾಗೂ ಜೂನ್ 22 ರಂದು ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನಲ್ಲಿ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ.

ನಿಮ್ಮೂರಿಗೆ ಬರ್ತಾರೆ, ಶಾಲೆಯಲ್ಲಿ ತಂಗ್ತಾರೆ: ಸಿಎಂ ನಡೆಯ ಹಿಂದಿದೆ ಸೀಕ್ರೆಟ್!

ಅದರಂತೆಯೇ ಜುಲೈ 5 ಹಾಗೂ 6 ರಂದು ಬೀದರ್, ಬಸವಕಲ್ಯಾಣ ಹಾಗೂ ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕುಗಳಲ್ಲಿ ಗ್ರಾಮ ವಾಸ್ತವ್ಯ ಮುಂದುವರಿಯಲಿದೆ.ಗ್ರಾಮ ವಾಸ್ತವ್ಯದ ವೇಳೆ ಆಯಾ ಹಳ್ಳಿಯ ಸಮಸ್ಯೆಗಳ ಬಗ್ಗೆ ಸ್ಥಳದಲ್ಲಿಯೇ ಅಧಿಕಾರಿಗಳ ಜತೆ ಸಭೆ, ಚರ್ಚೆಗಳನ್ನು ನಡೆಸಲಿದ್ದಾರೆ.

ಈ ಬಾರಿ ಗ್ರಾಮ ವಾಸ್ತವ್ಯದ ವಿಶೇಷ ಅಂದ್ರೆ ಯಾರ ಮನೆಯಲ್ಲೂ ಉಳಿದುಕೊಳ್ಳುತ್ತಿಲ್ಲ. ಬದಲಾಗಿ ಭೇಟಿ ನೀಡುವ ಆ ಊರಿನ ಸರ್ಕಾರಿ ಶಾಲೆಯಲ್ಲೇ  ವಾಸ್ತವ್ಯ ಹೂಡಲಿದ್ದಾರೆ.

ಈ ಬಗ್ಗೆ ಕುಮಾರಸ್ವಾಮಿ ಅವರು ಇಂದು [ಸೋಮವಾರ] ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಅಧಿಕಾರಿಗಳ ಸಭೆ ನಡೆಸಿ ಚರ್ಚಿಸಿದ್ದು, ಗ್ರಾಮ ವಾಸ್ತವ್ಯದ ಸ್ವರೂಪ ಹೇಗಿರಬೇಕು ಎಂಬ ಕುರಿತು ಮಾತುಕತೆ ನಡೆಸಿದರು.

Latest Videos
Follow Us:
Download App:
  • android
  • ios