ಮೂರು ದಿನಗಳ ಹಿಂದೆ ಭಾರತದ ಮಾಜಿ ಸೇನಾಧಿಕಾರಿ ಕುಲಭೂಷಣ್ ಜಾಧವ್ ಗಲ್ಲುಶಿಕ್ಷೆ ಪ್ರಕರಣದ ವಿಚಾರಣೆ ನಡೆಸಿದ ಅಂತರಾಷ್ಟ್ರೀಯ ನ್ಯಾಯಾಲಯ ನಾಳೆ ತೀರ್ಪು ನೀಡಲಿದೆ.  

ನವದೆಹಲಿ (ಮೇ.17): ಮೂರು ದಿನಗಳ ಹಿಂದೆ ಭಾರತದ ಮಾಜಿ ಸೇನಾಧಿಕಾರಿ ಕುಲಭೂಷಣ್ ಜಾಧವ್ ಗಲ್ಲುಶಿಕ್ಷೆ ಪ್ರಕರಣದ ವಿಚಾರಣೆ ನಡೆಸಿದ ಅಂತರಾಷ್ಟ್ರೀಯ ನ್ಯಾಯಾಲಯ ನಾಳೆ ತೀರ್ಪು ನೀಡಲಿದೆ.

ಮೂಲಗಳ ಪ್ರಕಾರ ನಾಲೆ ಮಧ್ಯಾಹ್ನ 3.30 ರ ಸುಮಾರಿಗೆ ತೀರ್ಪು ಹೊರಬೀಳುವ ಸಾಧ್ಯತೆಯಿದೆ.

ಅಂತರಾಷ್ಟ್ರೀಯ ನ್ಯಾಯಾಲಯದ ತೀರ್ಪು ಹೊರಬೀಳುವ ಮುನ್ನವೇ ಪಾಕಿಸ್ತಾನ ಕುಲಭೂಷಣ್ ರವರನ್ನು ಗಲ್ಲಿಗೇರಿಸುವ ಅಪಾಯವಿದೆ.ಹಾಗಾಗಿ ಕೂಡಲೇ ಗಲ್ಲುಶಿಕ್ಷೆಯನ್ನು ರದ್ದುಗೊಳಿಸಬೇಕೆಂದು ಭಾರತ ಪ್ರಬಲವಾಗಿ ನ್ಯಾಯಾಲಯದಲ್ಲಿ ವಾದಿಸಿತ್ತು. ಭಾರತದ ಪರ ಹರೀಶ್ ಸಾಳ್ವೆ ವಾದ ಮಂಡಿಸಿದ್ದರು. 11 ನ್ಯಾಯಾಧೀಶರ ಪೀಠವು ಎರಡೂ ದೇಶಗಳ ವಾದವನ್ನು ಆಲಿಸಿದ್ದು ನಾಳೆ ಹೊರ ಬೀಳುವ ತೀರ್ಪು ಎರಡೂ ದೇಶಗಳಿಗೆ ಪ್ರತಿಷ್ಟೆಯ ಪ್ರಶ್ನೆಯಾಗಿದೆ.

18 ವರ್ಷಗಳ ನಂತರ ಉಭಯ ದೇಶಗಳು ಅಂತರಾಷ್ಟ್ರೀಯ ನ್ಯಾಯಾಲಯದ ಮೆಟ್ಟಿಲೇರಿದ್ದವು.