ಕುಕ್ಕೆಗೆ ಹೋಗುವ ಭಕ್ತರೇ ಗಮನಿಸಿ; ದರ್ಶನ ಸಮಯ ಬದಲಾವಣೆ

First Published 3, Jul 2018, 10:46 AM IST
Kukke Subrahmanya Temple Darshan timings changed
Highlights

ಬೆಳಿಗ್ಗೆ 6.30ರ ಬದಲು 9 ಗಂಟೆಗೆ ದೇವರ ದರ್ಶನ ಆರಂಭವಾಗಲಿದೆ.  ನಾಳೆ ದೇವರಿಗೆ ದ್ರವ್ಯಕಲಶಾಭಿಷೇಕ ಮತ್ತು ದೇವಳದ ವತಿಯಿಂದ ಆಶ್ಲೇಷ ಬಲಿ ಸೇವೆ ಇರುವುದರಿಂದ ಭಕ್ತರ ಸಂಖ್ಯೆ ಹೆಚ್ಚಿರುತ್ತದೆ. ಹೀಗಾಗಿ ದರ್ಶನ ಸಮಯವನ್ನು ಬದಲಾವಣೆ ಮಾಡಲಾಗಿದೆ ಎಂದು ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಸುವರ್ಣ ನ್ಯೂಸ್’ಗೆ ಹೇಳಿದ್ದಾರೆ. 

ಮಂಗಳೂರು (ಜು. 03): ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನಾಳೆಯ ದರ್ಶನ ಸಮಯದಲ್ಲಿ ಬದಲಾವಣೆಯಾಗಿದೆ.  

ಬೆಳಿಗ್ಗೆ 6.30ರ ಬದಲು 9 ಗಂಟೆಗೆ ದೇವರ ದರ್ಶನ ಆರಂಭವಾಗಲಿದೆ.  ನಾಳೆ ದೇವರಿಗೆ ದ್ರವ್ಯಕಲಶಾಭಿಷೇಕ ಮತ್ತು ದೇವಳದ ವತಿಯಿಂದ ಆಶ್ಲೇಷ ಬಲಿ ಸೇವೆ ಇರುವುದರಿಂದ ಭಕ್ತರ ಸಂಖ್ಯೆ ಹೆಚ್ಚಿರುತ್ತದೆ. ಹೀಗಾಗಿ ದರ್ಶನ ಸಮಯವನ್ನು ಬದಲಾವಣೆ ಮಾಡಲಾಗಿದೆ ಎಂದು ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಸುವರ್ಣ ನ್ಯೂಸ್’ಗೆ ಹೇಳಿದ್ದಾರೆ. 

ಜು.5 ರಿಂದ ಪ್ರತಿನಿತ್ಯ ಸಂಜೆಯೂ ಶ್ಲೇಷ ಬಲಿ ಸೇವೆ ನಡೆಯಲಿದೆ. ದರ್ಶನಕ್ಕೆ ಬರುವ ಭಕ್ತರು ಬದಲಾದ ದರ್ಶನ ಸಮಯವನ್ನು ಗಮನಿಸಬೇಕು ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ. 

loader