ಇಂಡಿಯನ್ ಇನ್ಸ್​ಸ್ಟಿಟ್ಯೂಟ್​ ಆಫ್ ಸೈನ್ಸ್​ ಸಹಯೋಗದೊಂದಿಗೆ ಇದೇ ಮೊದಲ ಬಾರಿಗೆ  ಆನ್​​ಲೈನ್​​​ ಪರೀಕ್ಷೆ ಆಯೋಜಿಸಿದ್ದ KSRTC ಸಂಸ್ಥೆ ,

ಬೆಂಗಳೂರು(ನ.20): ನಗರದಲ್ಲಿ ಇಂದು ವಿವಿಧ ಶೇಣಿಗಳಿಗೆ ನಡೆಯಬೇಕಿದ್ದ ಕೆಎಸ್'ಆರ್ಟಿಸಿ ಆನ್'ಲೈನ್ ಪರೀಕ್ಷೆ ತಾಂತ್ರಿಕ ತೊಂದರೆಗಳಿಂದಾಗಿ ರದ್ದಾಗಿದೆ. ಪರೀಕ್ಷೆ ರದ್ದಾಗಿರುವ ಬಗ್ಗೆ ಅಧಿಕೃತ ಮಾಹಿತಿ ನೀಡಿರುವ ಕೆ ಎಸ್ ಆರ್ ಟಿ ಸಿ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಕಟಾರೀಯ,ಪರೀಕ್ಷೆಗೆ ಹಾಜರಾಗಿ ತೊಂದರೆಯಾಗಿರುವುದರಿಂದ ಅಭ್ಯರ್ಥಿಗಳಗೆ ತಮ್ಮ ಊರುಗಳಿಗೆ ತೆರಳಲು ಉಚಿತವಾಗಿ ಬಸ್ಸ್ ಗಳ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಇಂಡಿಯನ್ ಇನ್ಸ್​ಸ್ಟಿಟ್ಯೂಟ್​ ಆಫ್ ಸೈನ್ಸ್​ ಸಹಯೋಗದೊಂದಿಗೆ ಇದೇ ಮೊದಲ ಬಾರಿಗೆ ಆನ್​​ಲೈನ್​​​ ಪರೀಕ್ಷೆ ಆಯೋಜಿಸಿದ್ದ KSRTC ಸಂಸ್ಥೆ , ಪರೀಕ್ಷೆ ರದ್ದಾಗಿರುವುದರಿಂದ ಲೋಪಗಳನ್ನು ಸರಿಪಡಿಸಿ ಪರೀಕ್ಷೆಯ ಹೋಸ ದಿನಾಂಕವನ್ನು ಸದ್ಯದಲ್ಲಿಯೇ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ. ಅಂದು ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಉಚಿತವಾಗಿಯೆ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದರು.