ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್ಸಾರ್ಟಿಸಿ) ಕೇಂದ್ರೀಯ ವಿಭಾಗದಿಂದ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರು- ತಂಜಾವೂರು ಮತ್ತು ಬೆಂಗಳೂರು- ಕೊಯಮತ್ತೂರು ಮಾರ್ಗದಲ್ಲಿಒಂದು ನಾನ್‌ ಎಸಿ ಸ್ಲೀಪರ್‌ ಬಸ್‌ ಸೇವೆ ಒದಗಿಸಲಿದೆ. 

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್ಸಾರ್ಟಿಸಿ) ಕೇಂದ್ರೀಯ ವಿಭಾಗದಿಂದ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರು- ತಂಜಾವೂರು ಮತ್ತು ಬೆಂಗಳೂರು- ಕೊಯಮತ್ತೂರು ಮಾರ್ಗದಲ್ಲಿ ಸೆ.24ರಿಂದ ತಲಾ ಒಂದು ನಾನ್‌ ಎಸಿ ಸ್ಲೀಪರ್‌ ಬಸ್‌ ಸೇವೆ ನೀಡಲಿದೆ.

ಬೆಂಗಳೂರು- ತಂಜಾವೂರು ಮಾರ್ಗದ ಬಸ್‌ ನಿತ್ಯ ರಾತ್ರಿ 9.30ಕ್ಕೆ ಹೊರಟು ಬೆಳಗ್ಗೆ 6.15ಕ್ಕೆ ತಂಜಾವೂರು ತಲುಪಲಿದೆ. ಅಲ್ಲಿಂದ ರಾತ್ರಿ 9ಕ್ಕೆ ಹೊರಟು ಮುಂಜಾನೆ 5.45ಕ್ಕೆ ಬೆಂಗಳೂರು ತಲುಪಲಿದೆ. ವಯಸ್ಕ ಪ್ರಯಾಣಿಕರಿಗೆ ಟಿಕೆಟ್‌ ದರ .625 ನಿಗದಿಗೊಳಿಸಲಾಗಿದೆ. 

ಬೆಂಗಳೂರು- ಕೊಯಮತ್ತೂರು ಮಾರ್ಗದ ಬಸ್‌ ನಿತ್ಯ ರಾತ್ರಿ 11ಕ್ಕೆ ಹೊರಟು ಬೆಳಗ್ಗೆ 6.30ಕ್ಕೆ ಕೊಯಮತ್ತೂರು ತಲುಪಲಿದೆ. ಅಲ್ಲಿಂದ ರಾತ್ರಿ 10.15ಕ್ಕೆ ಹೊರಟು ಬೆಳಗ್ಗೆ 6.30ಕ್ಕೆ ಬೆಂಗಳೂರು ತಲುಪಲಿದೆ. ವಯಸ್ಕರ ಪ್ರಯಾಣಕ್ಕೆ ಟಿಕೆಟ್‌ ದರ .580 ನಿಗದಿಗೊಳಿಸಲಾಗಿದೆ ಎಂದು ಕೆಎಸ್ಸಾರ್ಟಿಸಿ ಪ್ರಕಟಣೆ ತಿಳಿಸಿದೆ.