ಬೆಂಗಳೂರು [ಜೂ.17] : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಸಾರ್ಟಿಸಿ)ವು ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರು- ಮುಂಡರಗಿ ಮಾರ್ಗದಲ್ಲಿ ಜುಲೈ 1ರಿಂದ ನಾನ್‌ ಎಸಿ ಸ್ಲೀಪರ್‌ ಬಸ್‌ ಕಾರ್ಯಾಚರಣೆ ಮಾಡುವುದಾಗಿ ತಿಳಿಸಿದೆ. 

ಈ ಬಸ್‌ ಪ್ರತಿ ದಿನ ಬೆಂಗಳೂರಿನಿಂದ ರಾತ್ರಿ 11.15ಕ್ಕೆ ಹೊರಟು ದಾವಣಗೆರೆ, ಹರಪ್ಪನಹಳ್ಳಿ, ಹೂವಿನಹಡಗಲಿ ಮಾರ್ಗದಲ್ಲಿ ಬೆಳಗ್ಗೆ 7.45ಕ್ಕೆ ಮುಂಡರಗಿ ತಲುಪಲಿದೆ. 

ಅಲ್ಲಿಂದ ರಾತ್ರಿ 8 ಗಂಟೆಗೆ ಹೊರಟು ಮುಂಜಾನೆ 4.30ಕ್ಕೆ ಬೆಂಗಳೂರಿಗೆ ಬರಲಿದೆ. ಸಾರ್ವಜನಿಕರು ಈ ಬಸ್‌ ಸೌಲಭ್ಯ ಬಳಸಿಕೊಳ್ಳುವಂತೆ ಕೆಎಸ್‌ಆರ್‌ಟಿಸಿ ಕೋರಿದೆ.