ಜೆಡಿಎಸ್ ನಿಂದ ನೇಮಕವಾಗಿದ್ದ ಜಯರಾಮ್ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ| ಡಾ.ಕೆ ಸುಧಾಕರ್ ಗೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನ| ಕೈ ಅತೃಪ್ತ ಶಾಸಕರ ಅಸಮಾಧಾನ ತಣ್ಣಗಾಗಿಸಲು ಮುಂದಾದ ದೋಸ್ತಿಗಳು|
ಬೆಂಗಳೂರು, (ಜೂ.20): ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರನ್ನಾಗಿ ಚಿಕ್ಕಬಳ್ಳಾಪುರ ಶಾಸಕ ಸುಧಾಕರ್ ಅವರನ್ನು ರಾಜ್ಯ ಸರ್ಕಾರ ನೇಮಕ ಇಂದು (ಗುರುವಾರ) ಆದೇಶ ಹೊರಡಿಸಿದೆ.
ಸರ್ಕಾರದ ಆದೇಶದಂತೆ ಬೆಂಗಳೂರಿನ ಚರ್ಚ್ ಶೀರ್ಟ್ ನಲ್ಲಿರುವ ಮಾಲಿನ್ಯ ನಿಯಂತ್ರಣ ಮಂಡಳಿಯ ಮುಖ್ಯ ಕಚೇರಿಯಲ್ಲಿ ಸುಧಾಕರ್ ಅಧಿಕಾರ ಸ್ವೀಕರಿಸಿದರು.
ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನ ಕಾಂಗ್ರೆಸ್ ಗೆ ನೀಡಲು ಜೆಡಿಎಸ್ ನಿರ್ಧಾರ ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗೆ ಜಯರಾಮ್ ಅವರು ರಾಜೀನಾಮೆ ನೀಡಿದ್ದರು.
"
‘ಯಾವನಿಗ್ರಿ ಬೇಕು ಪುಟಗೋಸಿ ನಿಗಮ ಮಂಡಳಿ ಅಧ್ಯಕ್ಷಗಿರಿ’
ಕಾಂಗ್ರೆಸ್ ಅತೃಪ್ತ ಶಾಸಕರ ಅಸಮಾಧಾನ ತಣ್ಣಗಾಗಿಸಲು ಜೆಡಿಎಸ್, ಜಯರಾಮ್ ಅವರನ್ನು ರಾಜೀನಾಮೆ ಕೊಡಿಸಿದೆ. ಸುಧಾಕರ್ ಅವರನ್ನು ನೇಮಕ ಮಾಡಿಬೇಕೆಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ 4 ತಿಂಗಳು ಹಿಂದೆಯೇ ಶಿಫಾರಸು ಮಾಡಿದ್ದರು.
ಆದ್ರೆ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಾತ್ರ ಸುಧಾಕರ್ ನೇಮಕಕ್ಕೆ ಒಪ್ಪದೆ, ಕಳೆದ ಫೆಬ್ರವರಿಯಲ್ಲಿ ಸೇವೆಯಿಂದ ನಿವೃತ್ತರಾಗಿದ್ದ ಐಎಫ್‌ಎಸ್ ಅಧಿಕಾರಿಗೆ ಸಿ.ಜಯರಾಮ್ ಅವರನ್ನು ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರನ್ನಾಗಿ ಮಾಡಿದ್ದರು.
ಇದು ಸುಧಾಕರ್ ಸೇರಿದಂತೆ ಇತರೆ ಕಾಂಗ್ರೆಸ್ ನಾಯಕರ ಆಕ್ರೋಶಕ್ಕೆ ಕಾರಣವಾಗಿತ್ತು. ಮಾತ್ರವಲ್ಲದೇ ಜೆಡಿಎಸ್ ಹಾಗೂ ಕಾಂಗ್ರೆಸ್ ದೋಸ್ತಿ ನಾಯಕರ ಕಿತ್ತಾಟಕ್ಕೆ ಕಾರವಾಗಿತ್ತು.
