ಶಿವಮೊಗ್ಗದಲ್ಲಿ ಮಾತನಾಡಿದ ಅವರು,ಬೆಂಗಳೂರಿನಲ್ಲಿ ಎಂಎಲ್'ಸಿಗಳ ಸಭೆ ನಡೆಯುತ್ತಿದೆ. ಕಾರಣಾಂತರಗಳಿಂದ ಸಭೆಗೆ ಹೋಗಲು ಸಾಧ್ಯವಾಗಲಿಲ್ಲ.
ಶಿವಮೊಗ್ಗ(ಜ.12): ನನ್ನ ಕತ್ತರಿಸಿದರೂ ನಾನಿಲ್ಲೇ ಇರ್ತೀನಿ. ಬಿಜೆಪಿ ನನ್ನ ತಾಯಿ ಇದ್ದಂತೆ, ನಾನು ಬಿಎಸ್‌ವೈ ಅಣ್ಣ-ತಮ್ಮ ಇದ್ದಂಗೆ.ನಮ್ಮ ಗೊಂದಲಗಳು ಸರಿಯಾಗುತ್ತದೆ ಎಂದು ತಮ್ಮ ಹಾಗೂ ಬಿಎಸ್'ವೈ ನಡುವೆ ಇರುವ ಗೊಂದಲಗಳ ಬಗ್ಗೆ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಅವರು,ಬೆಂಗಳೂರಿನಲ್ಲಿ ಎಂಎಲ್'ಸಿಗಳ ಸಭೆ ನಡೆಯುತ್ತಿದೆ. ಕಾರಣಾಂತರಗಳಿಂದ ಸಭೆಗೆ ಹೋಗಲು ಸಾಧ್ಯವಾಗಲಿಲ್ಲ. ಅಲ್ಲದೆ ಬ್ರಿಗೇಡ್ ಸಭೆಗೆ ಹೋಗದಂತೆ ಕಾರ್ಯಕರ್ತರಿಗೆ ಎಚ್ಚರಿಕೆ ಕೊಟ್ಟಿದ್ದಾರೆ. ಅದನ್ನು ಯಾರು ಗಂಭೀರವಾಗಿ ಪರಿಗಣಿಸಬೇಕಾಗಿಲ್ಲ ಎಂದು ಹೇಳಿದರು.
ಬಿಎಸ್ ವೈ ಲಿಂಗಾಯುತರ ಸಭೆಗಳಿಗೆ, ಪ್ರಹ್ಲಾದ್ ಜೋಷಿ,ಅನಂತ್ ಕುಮಾರ್ ಬ್ರಾಹ್ಮಣ ಸಭೆಗಳಿಗೆ ಹೋಗುವಂತೆ ನಾನು ಬ್ರಿಗೇಡ್ ಸಭೆಗಳಲ್ಲಿ ಭಾಗವಹಿಸೋದು ತಪ್ಪಲ್ಲ. ಕಾರ್ಯಕರ್ತರು ಸಭೆಗೆ ಹೋಗೋದರಲ್ಲಿ ತಪ್ಪಿಲ್ಲ. ಬಿಎಸ್‌ವೈ ಬಿಟ್ಟು ಬೇರಾರು ಬ್ರಿಗೇಡ್ ವಿರೋಧಿಸುತ್ತಿಲ್ಲ ಎಂದು ತಿಳಿಸಿದರು.
