ನಾನು ಬಿಎಸ್ ಯಡಿಯೂರಪ್ಪ ರಾಮ ಲಕ್ಷ್ಮಣ ಇದ್ದಂಗೆ

First Published 30, Mar 2018, 11:39 AM IST
KSE Slams Siddaramaiah
Highlights

ಶಾ ಆಶಯದಂತೆ ಬಿಎಸ್‌ವೈ'ರನ್ನ ಸಿಎಂ ಆಗಿ ಮಾಡೇ ಮಾಡ್ತೆವೆ.

ಕಲಬುರಗಿ(ಮಾ.30): ನಾನು ಮತ್ತು ಬಿಎಸ್ ಯಡಿಯೂರಪ್ಪ ರಾಮ ಲಕ್ಷ್ಮಣ ಇದ್ದಂಗೆ. ಇಬ್ಬರ ಮಧ್ಯೆ ಯಾವುದೇ ರೀತಿಯ ವೈಮನಸ್ಸು ಇಲ್ಲಾ. ಪಕ್ಷ ಅಂದಮೇಲೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಇರುತ್ತವೆ. ಅವೆಲ್ಲವನ್ನ ಬಗೆಹರಿಸಿಕೊಂಡು ಪಕ್ಷವನ್ನ ಅಧಿಕಾರಕ್ಕೆ ತರುತ್ತೇವೆ' ಎಂದು ವಿಧಾನ ಪರಿಷತ್'ನ ವಿಪಕ್ಷ ನಾಯಕ ಕೆಎಸ್ ಈಶ್ವರಪ್ಪ ತಿಳಿಸಿದರು.

ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಶಾ ಆಶಯದಂತೆ ಬಿಎಸ್‌ವೈ'ರನ್ನ ಸಿಎಂ ಆಗಿ ಮಾಡೇ ಮಾಡ್ತೆವೆ. ಸಿದ್ದರಾಮಯ್ಯನಿಗೆ ಮೋದಿ, ಶಾ ಮತ್ತು ಬಿಎಸ್‌ವೈ ಅವರಿಗೆ ಬೈಯದೆ ಇದ್ದರೆ ತಿಂದ ಅನ್ನ ಜೀರ್ಣವಾಗುವುದಿಲ್ಲ. ಅವರಿಗೆ ಸೋಲಿನ ಭೀತಿ ಕಾಡುತ್ತಿದೆ. ಸಿಎಂ ಆಗಿ ಆ ಸ್ಥಾನಕ್ಕೆ ಘನತೆ ಗೌರವ ಬರುವಹಾಗೇ ನಡೆದುಕೊಳ್ಳಿ' ಎಂದು ವಾಗ್ದಾಳಿ ನಡೆಸಿದರು.

loader