ಈಶ್ವರಪ್ಪ ಕುಟುಂಬ ಸಮೇತರಾಗಿ ನಡೆಸಿದ ಈ ನಾಗಬ್ರಹ್ಮನನನ್ನು ಸಂತೃಪ್ತಿ ಪಡಿಸಿ ತಮಗೆ ಅಥವಾ ತಮ್ಮ ಕುಟುಂಬಕ್ಕೆ ಆಗುವ ವೈಯಕ್ತಿಕ ತೊಂದರೆಯನ್ನು ನಿವಾರಿಸುವ ಸಂಬಂಧ ಈ ಆಶ್ಲೇಷಾ ಬಲಿಯ ವಿಶೇಷ ಪೂಜೆ ಕೈಗೊಂಡರು.
ಶಿವಮೊಗ್ಗ(ಏ.28): ಬೆಂಗಳೂರಿನಲ್ಲಿ ಬಿಜೆಪಿ ಅತೃಪ್ತರ ಸಭೆ ನಡೆಸಿ ಬಿಜೆಪಿಯಲ್ಲಿ ಅಸಮಾಧಾನ ಹೊಗೆ ಭುಗಿಲೇಳುವಂತೆ ಮಾಡಿ ತವರು ಶಿವಮೊಗ್ಗಕ್ಕೆ ವಾಪಾಸಾಗಿದ್ದ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಮನೆಯಲ್ಲಿ ಆಶ್ಲೇಷಾ ಬಲಿ ಪೂಜೆ ನಡೆಸಿ ಗಮನ ಸೆಳೆದರು.
ಈಶ್ವರಪ್ಪ ಕುಟುಂಬ ಸಮೇತರಾಗಿ ನಡೆಸಿದ ಈ ನಾಗಬ್ರಹ್ಮನನನ್ನು ಸಂತೃಪ್ತಿ ಪಡಿಸಿ ತಮಗೆ ಅಥವಾ ತಮ್ಮ ಕುಟುಂಬಕ್ಕೆ ಆಗುವ ವೈಯಕ್ತಿಕ ತೊಂದರೆಯನ್ನು ನಿವಾರಿಸುವ ಸಂಬಂಧ ಈ ಆಶ್ಲೇಷಾ ಬಲಿಯ ವಿಶೇಷ ಪೂಜೆ ಕೈಗೊಂಡರು. ನಾಡಿನಲ್ಲಿ ಒಳ್ಳೆಯದಾಗಲಿ ಎಂದು ಈ ಪೂಜೆ ನಡೆಸಿದ್ದಾಗಿ ಹೇಳಿದರಾದರೂ ಈ ಪೂಜೆಯಲ್ಲಿ ಅತೃಪ್ತರ ಸಭೆಯಲ್ಲಿ ಭಾಗವಹಿಸಿದ್ದ ಬಿಜೆಪಿ ಮುಖಂಡರಾದ ಮಾಜಿ ಸೂಡಾ ಅಧ್ಯಕ್ಷ ದತ್ತಾತ್ರೀ , ಮಾಜಿ ಕ್ರೀಡಾ ಪ್ರಾಧಿಕಾರದ ಅಧ್ಯಕ್ಷ ಗಿರೀಶ್ ಪಟೇಲ್ , ಎಂಎಲ್'ಸಿ ಎಂ.ಬಿ. ಭಾನುಪ್ರಕಾಶ್, ಸಂಗೊಳ್ಳಿ ರಾಯಣ್ಣ ಬಿಗ್ರೇಡ್ ರಾಜ್ಯಾಧ್ಯಕ್ಷ ವಿರೂಪಾಕ್ಷಪ್ಪ ಮೊದಲಾದವರು ಪೂಜೆಯಲ್ಲಿ ಪಾಲ್ಗೊಂಡು ನಂತರ ಊಟವನ್ನು ಮಾಡಿದರು.
ಪುರೋಹಿತರ ಪ್ರಕಾರ ಈ ಪೂಜೆಗೆ ರಾಜಕೀಯ ಮಹತ್ವ ಇಲ್ಲ, ಪೂಜೆಯನ್ನು ಸಂತಾನ ಬಯಸಿ , ಕಂಕಣ ಬಲಕ್ಕಾಗಿ , ಸರ್ಪದೋಷವಿದ್ದರೇ, ವೈಯಕ್ತಿಕ ಅನಾನುಕೂಲಗಳಿದ್ದರೇ ಮಾತ್ರ ಇಂತಹ ಪೂಜೆಗಳಿಂದ ಫಲ ಸಿಗಲಿದೆ ಎನ್ನುತ್ತಾರೆ. ಆದರೆ ಆಶ್ಲೇಷಾ ಬಲಿ ಪೂಜೆಯಲ್ಲಿ ಬಿಗ್ರೆಡ್ ಮುಖಂಡರು, ಅತೃಪ್ತ ಬಿಜೆಪಿ ನಾಯಕರು ಭಾಗವಹಿಸುವ ಮೂಲಕ ರಾಜಕೀಯವಾಗಿ ಕುತೂಹಲ ಕೆರಳಿಸಿದೆ.
