ಬಿಜೆಪಿ ಮುಖಂಡ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ನಾಲ್ಕು ಪುಟಗಳ ಬಹಿರಂಗ ಪತ್ರ ಬರೆದಿದ್ದಾರೆ. 

ಶಿವಮೊಗ್ಗ: ಸಾರ್ವಜನಿಕ ಸಭೆಗಳಲ್ಲಿ ಪದೇ ಪದೆ ತಮ್ಮ ಸಾವಿನ ಕುರಿತು ಮಾತನಾಡುತ್ತಿ ರುವುದು ಮುಜುಗರ ತಂದಿದೆ. ರೈತರ ಸಾಲಮನ್ನಾ ಸೇರಿ ಅನೇಕ ಜವಾಬ್ದಾರಿಗಳನ್ನು ನಿರ್ವಹಿಸುವ ಮಾತು ನೀಡಿ ರುವ ನೀವು, ಅದನ್ನು ಈಡೇರಿಸಲು ಇನ್ನೂ ಹತ್ತಾರು ವರ್ಷ ಬಾಳಬೇಕು ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಉದ್ದೇಶಿಸಿ ಬಹಿರಂಗ ಪತ್ರ ಬರೆದಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

4 ಪುಟಗಳ ಪತ್ರ ಬರೆದಿರುವ ಈಶ್ವರಪ್ಪ, ಬಜೆಟ್ ಮಂಡನೆ ವೇಳೆ ನಾಡಿನ ರೈತರಿಗೆ ಸಾಲಮನ್ನಾ ಮಾಡುವ ಭರವಸೆ ನೀಡಿದ್ದೀರಿ. ಅದನ್ನು ನಂಬಿಕೊಂಡು ಲಕ್ಷಾಂತರ ರೈತರು ಕಾಯುತ್ತಿದ್ದಾರೆ. ಅದನ್ನು ಈಡೇರಿಸುವ ಮಹತ್ವದ ಜವಾಬ್ದಾರಿ ತಮ್ಮ ಮೇಲಿದೆ. ಹೀಗಾಗಿ, ತಾವು ಬದುಕಿ ಬಾಳಬೇಕು ಎಂದಿದ್ದಾರೆ.