'ಸಿದ್ದು ಮುಸ್ಲಿಮರಿಗೆ ಹೀರೋ, ಹಿಂದೂಗಳಿಗೆ ವಿಲನ್‌'

ಸಿದ್ದರಾಮಯ್ಯ ಅವರು ಮುಸ್ಲಿಂರಿಗೆ ಹೀರೋ ಆದರೆ, ಹಿಂದೂಗಳಿಗೆ ಮಾತ್ರ ವಿಲನ್‌ ಆಗಿದ್ದಾರೆ, ಒಟ್ಟಿನಲ್ಲಿ ಕರ್ನಾಟಕ ರಾಜ್ಯದ ಹಿಂದೂಗಳ ಏಕೈಕ ವಿಲನ್‌ ಅಂದರೆ ಅದು ಸಿದ್ದರಾಮಯ್ಯ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ಲೇವಡಿ ಮಾಡಿದರು

ks Eshwarappa slams siddaramaiah

 ಮಂಡ್ಯ(ಅ.2): ಸಿದ್ದರಾಮಯ್ಯ ಅವರು ಮುಸ್ಲಿಂರಿಗೆ ಹೀರೋ ಆದರೆ, ಹಿಂದೂಗಳಿಗೆ ಮಾತ್ರ ವಿಲನ್‌ ಆಗಿದ್ದಾರೆ, ಒಟ್ಟಿನಲ್ಲಿ ಕರ್ನಾಟಕ ರಾಜ್ಯದ ಹಿಂದೂಗಳ ಏಕೈಕ ವಿಲನ್‌ ಅಂದರೆ ಅದು ಸಿದ್ದರಾಮಯ್ಯ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ಲೇವಡಿ ಮಾಡಿದರು.

ಶನಿವಾರ ಹಿಂದುಳಿದ ವರ್ಗಗಳ ಜಾಗೃತಿ ಸಮಾವೇಶದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಡಿ.ಕೆ.ಶಿವಕುಮಾರ್‌ಗೆ ವಿಲನ್‌, ಕಾಂಗ್ರೆಸ್‌ಗೂ ವಿಲನ್‌, ಹಿಂದುಳಿದವರು, ದಲಿತರಿಗೂ ವಿಲನ್ನೇ. ಮುಸ್ಲಿಮರಿಗೆ ಮಾತ್ರ ಹೀರೋ ಎಂದು ಛೇಡಿಸಿದರು.

ಕರ್ನಾಟಕಕ್ಕೆ ಬಂದಿರುವ ರಾಹುಲ್‌ ಗಾಂಧಿ ಅವರನ್ನು ಸ್ವಾಗತ ಮಾಡುತ್ತೇನೆ. ಮೊದಲು ಕಾಂಗ್ರೆಸ್‌ ಪಕ್ಷದವರು ಡಿ.ಕೆ.ಶಿವಕುಮಾರ್‌ ಮತ್ತು ಸಿದ್ದರಾಮಯ್ಯ ಅವರನ್ನು ಒಂದು ಮಾಡಲಿ. ಏಕೆಂದರೆ, ಸಿದ್ದರಾಮಯ್ಯ ಕಾಡುಮೇಡಿಗೆ ಹೋಗಿ ಡಿ.ಕೆ.ಶಿವಕುಮಾರ್‌ ಅವರಿಗೆ ಟಾಂಗ್‌ ಕೊಟ್ಟು ರಾಹುಲ್‌ ಗಾಂಧಿ ಜೊತೆ ತಿಂಡಿ ತಿಂತಾರೆ, ಡಿ.ಕೆ.ಶಿವಕುಮಾರ್‌ ಆಮೇಲೆ ಹೋಗಿ ರಾಹುಲ್‌ ಗಾಂಧಿ ಭೇಟಿ ಮಾಡುತ್ತಾರೆ. ಮೊದಲು ರಾಹುಲ್‌ ಈ ಇಬ್ಬರು ನಾಯಕರನ್ನು ಒಂದು ಮಾಡಲಿ. ಆ ನಂತರ ಭಾರತ್‌ ಜೋಡೋ ಮಾಡಲಿ ಎಂದು ಸಲಹೆ ನೀಡಿದರು.

ಕಾಂಗ್ರೆಸ್‌ ಎಂದೂ ಒಂದಾಗದು: ಸಿದ್ದರಾಮಯ್ಯ ಕರ್ನಾಟಕದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಹಾಳು ಮಾಡಿದ್ದಾಯಿತು. ಮುಖ್ಯಮಂತ್ರಿ ಸ್ಥಾನವನ್ನು ಕಳೆದುಕೊಂಡಾಯ್ತು, ಎಷ್ಟೋ ಕಡೆ ಶಾಸಕ ಸ್ಥಾನಗಳನ್ನು ಕಳೆದುಕೊಂಡಿರುವ ಹೊತ್ತಿನಲ್ಲಿ, ಪಾರ್ಲಿಮೆಂಟ್‌​ನಲ್ಲಿ ಒಂದೇ ಒಂದು ಸೀಟ್‌ ಗೆದ್ದಿದ್ದಾರೆ, ಈಗಲೂ ಸಹ ನಿಮ್ಮ ಹಣೆಬರಹ ಬದಲಾಗೂ ಇಲ್ಲ, ನೀವೂ ಒಟ್ಟಾಗಿಯೂ ಇಲ್ಲ, ಹಾಗಾಗಿ ಕಾಂಗ್ರೆಸ್‌ ಜೋಡೋ ಮೊದಲು ಮಾಡಲಿ ಎಂದು ಸಲಹೆ ನೀಡಿದರು.

ಕಾಂಗ್ರೆಸ್‌ ಎ​ಲ್ಲಿ​ದೆ? : ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಧೂಳಿಪಟ ಮಾಡಲು ರಾಜ್ಯದಲ್ಲಿ ಕಾಂಗ್ರೆಸ್‌ ಎಲ್ಲಿದೆ ಎಂದು ತೋರಿಸಲಿ, ಕಾಂಗ್ರೆಸ್‌ನವರ ಮಕ್ಕಳನ್ನು ಕೇಳಿದರೂ ಪ್ರಧಾನಮಂತ್ರಿ ನರೇಂದ್ರ ಮೋದಿ ಹೆಸರು ಹೇಳುತ್ತಾರೆ. ರಾಹುಲ್‌ ಗಾಂಧಿ ಹೆಸರನ್ನು ಒಬ್ಬರು ಹೇಳುತ್ತಾರಾ ಎಂದು ಟಾಂಗ್‌ ಕೊಟ್ಟಕೆ.ಎಸ್‌.ಈಶ್ವರಪ್ಪ, ಬ್ರಹ್ಮ ಬಂದರೂ ಬಿಜೆಪಿ ಧೂಳಿಪಟ ಮಾಡಲು ಸಾಧ್ಯವಿಲ್ಲ ಎಂದು ಗುಡುಗಿದರು.

ಹಿಂದೂ​ಗಳ ಮತ ಬೇಡ ಎ​ನ್ನಲಿ: ಮುಸಲ್ಮಾನರನ್ನು ಓಲೈಸಿಕೊಂಡು ಮಾತನಾಡುವ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಹಿಂದೂಗಳ ಮತ ಬೇಡ ಎಂದು ಹೇಳಲಿ ನೋಡೋಣ. ಕೈಲಾಗದವನು ಎದುರು ಬರುವ ಪೈಲ್ವಾನ್‌ಗೆ ಒದಿತಿನಿ ಅಂತಾನೆ. ಅವನು ಎದ್ದೇಳುವುದೇ ಕಷ್ಟವಾಗಿರುವಾಗ ಒದೆಯುವುದಕ್ಕೆ ಆಗುವುದಿಲ್ಲ ಎಂದು ಆರ್‌ಎಸ್‌ಎಸ್‌ ಬ್ಯಾನ್‌ ಮಾಡಿ ಎಂದು ಹೇಳುವ ಮಾತಿಗೆ ತಿರುಗೇಟು ನೀಡಿದರು.

ಪಿ​ಎಫ್‌ಐ ಬ್ಯಾನ್‌ ಮಾ​ಡಿ​ದರೆ ತಪ್ಪು ಅಂತಾರೆ: ಕಾಂಗ್ರೆಸ್‌ನವರಿಗೆ ಆರ್‌ಎಸ್‌ಎಸ್‌ನವರನ್ನು ಕಂಡರೆ ಆಗುವುದಿಲ್ಲ. ಸಿದ್ದರಾಮಯ್ಯ, ಸಿ.ಎಂ.ಇಬ್ರಾಹಿಂ ಇವರಿಬ್ಬರೇ ಆರ್‌ಎಸ್‌ಎಸ್‌ ಬಗ್ಗೆ ಮಾತನಾಡುತ್ತಾರೆ. ಅವರಿಬ್ಬರೂ ಬೀಗರು. ಅವರಿಗೆ ಮುಸ್ಲಿಮರ ಓಟ್‌ ಬೇಕು. ಅದಕ್ಕಾಗಿ ಪಿಎಫ್‌ಐ ಬ್ಯಾನ್‌ ಮಾಡಿರುವುದನ್ನು ತಪ್ಪು ಎನ್ನುತ್ತಾರೆ. ಅವರಿಗೆ ಹಿಂದೂಗಳ ಓಟು ಬೇಡವೇ ಎನ್ನುವುದನ್ನು ಸ್ಪಷ್ಟವಾಗಿ ಹೇಳಲಿ. ಮುಸಲ್ಮಾನರೇ ಓಟಿನಲ್ಲೇ ಚುನಾವಣೆಯಲ್ಲಿ ಗೆದ್ದುಬರುತ್ತೇವೆ ಎಂದು ಹೇಳಲಿ ಎಂದು ಸವಾಲು ಹಾಕಿದರು.

‘ಗೂಂಡಾಗಿರಿಗೆಲ್ಲ ಬಿಜೆಪಿ ಹೆದರುವುದಿಲ್ಲ, ಈಗಾಗಲೇ ಪಿಎಫ್‌ಐ ಅನ್ನು ಮಟ್ಟಹಾಕಿದ್ದೇವೆ. ಅದರಂತೆ ಗೂಂಡಾಗಿರಿ ನಡೆಸುವವರನ್ನು ಮಟ್ಟಹಾಕುತ್ತೇವೆ ಎಂದು ಸಿ.ಪಿ.ಯೋಗೇಶ್ವರ್‌ ಕಾರಿನ ಮೇಲೆ ಜೆಡಿಎಸ್‌ ಕಾರ್ಯಕರ್ತರು ನಡೆಸಿದ ದಾಳಿ ವಿಚಾರಕ್ಕೆ ಪ್ರತಿಕ್ರಿಯಿಸಿದರು.

ರಾ​ಷ್ಟ್ರ​ಭ​ಕ್ತ​ ಮು​ಸ್ಲಿ​ಮ​ರಿ​ದ್ದಾರೆ:  ದೇಶದಲ್ಲಿರುವ ಎಲ್ಲ ಮುಸ್ಲಿಮರೂ ಗೂಂಡಾಗಳಲ್ಲ. ರಾಷ್ಟ್ರ ದ್ರೋಹಿಗಳು ಕೆಲವರು ಇದ್ದಾರೆ. ರಾಷ್ಟ್ರ ಭಕ್ತ ಮುಸ್ಲಿಮರು ಇವತ್ತು ಬಿಜೆಪಿ ಜೊತೆ ಬರುತ್ತಿದ್ದಾರೆ. ಕಾಂಗ್ರೆಸ್‌ನವರ ಪ್ಲೆP್ಸ… ಹರಿದಾಕುವ ಚಟ ಬಿಜೆಪಿಗಿಲ್ಲ, ಶಿವಮೊಗ್ಗದಲ್ಲಿ ವೀರಸಾವರ್ಕರ್‌ ಪ್ಲೆಕ್ಸ್ ಹರಿದು ಹಾಕಿದರು. ಒಬ್ಬ ಕಾಂಗ್ರೆಸ್‌ ನಾಯಕ ಖಂಡನೆ ಮಾಡಿಲ್ಲ. ಕಾಂಗ್ರೆಸ್‌ನವರು ಒಂದು ಕಮಿಟಿ ಮಾಡಲಿ. ಸಿದ್ದರಾಮಯ್ಯ, ಡಿಕೆಶಿ ಗುಂಪುಗಳಲ್ಲಿಯೇ ಯಾರು ಫ್ಲೆಕ್ಸ್‌ ಹರಿದು ಹಾಕಿದರು ಎಂಬ ಸತ್ಯ ಗೊತ್ತಾಗುತ್ತದೆ ಎಂದು ತಿರುಗೇಟು ನೀಡಿದರು.

Latest Videos
Follow Us:
Download App:
  • android
  • ios