ಕೃಷಿ ಹೊಂಡದ ಚಟುವಟಿಕೆ ಸೇರಿದಂತೆ ಜಲಾನಯನ ಕಾಮಗಾರಿಗಳ ಅನುಷ್ಠಾನದ ಕುರಿತು ಅರಿವು ಮೂಡಿಸಲು ಇಲಾಖೆ ವತಿಯಿಂದ ಸರ್ಕಾರೇತರ ಸಂಸ್ಥೆಗಳ ಸಹಯೋಗದೊಂದಿಗೆ ಬೀದಿನಾಟಕ, ಜಾಥ, ಗೋಡೆ ಬರಹ ಮತ್ತು ಗ್ರಾಮ ಸಭೆಗಳನ್ನು ಆಯೋಜಿಸುವುದರ ಮೂಲಕ ಅರಿವನ್ನು ಮೂಡಿಸಲಾತ್ತಿದೆ ಎಂದು ಕೃಷ್ಣಬೈರೇಗೌಡ ಹೇಳಿದ್ದಾರೆ.
ಬೆಂಗಳೂರು (ಮಾ.24): ಕೃಷಿ ಭಾಗ್ಯ ಯೋಜನೆಯನ್ನು ರಾಜ್ಯದ 25 ಜಿಲ್ಲೆಗಳ 132 ತಾಲ್ಲೂಕುಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಕೃಷಿ ಸಚಿವ ಕೃಷ್ಣಬೈರೇಗೌಡ ಅವರು ಇಂದು ಸದನಕ್ಕೆ ತಿಳಿಸಿದ್ದಾರೆ.
ಕೃಷಿ ಹೊಂಡದ ಚಟುವಟಿಕೆ ಸೇರಿದಂತೆ ಜಲಾನಯನ ಕಾಮಗಾರಿಗಳ ಅನುಷ್ಠಾನದ ಕುರಿತು ಅರಿವು ಮೂಡಿಸಲು ಇಲಾಖೆ ವತಿಯಿಂದ ಸರ್ಕಾರೇತರ ಸಂಸ್ಥೆಗಳ ಸಹಯೋಗದೊಂದಿಗೆ ಬೀದಿನಾಟಕ, ಜಾಥ, ಗೋಡೆ ಬರಹ ಮತ್ತು ಗ್ರಾಮ ಸಭೆಗಳನ್ನು ಆಯೋಜಿಸುವುದರ ಮೂಲಕ ಅರಿವನ್ನು ಮೂಡಿಸಲಾತ್ತಿದೆ ಎಂದು ಕೃಷ್ಣಬೈರೇಗೌಡ ಹೇಳಿದ್ದಾರೆ.
ರಾಜ್ಯದಲ್ಲಿ ಕೃಷಿ ಭಾಗ್ಯ ಯೋಜನೆಯನ್ನು 2014-15 ನೇ ಸಾಲಿನಿಂದ ಜಾರಿಗೊಳಿಸಲಾಗಿದೆ.
ಸಾವಯವ ಭಾಗ್ಯ ಯೋಜನೆ
ರಾಜ್ಯದಲ್ಲಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ 'ಸಾವಯವ ಭಾಗ್ಯ ಯೋಜನೆ' ಯನ್ನು 2013-14 ನೇ ಸಾಲಿನಿಂದ ಹಾಗೂ ಕೇಂದ್ರ ಪುರಸ್ಕೃತ 'ಪರಂಪರಾಗತ ಕೃಷಿ ವಿಕಾಸ' ಯೋಜನೆಯನ್ನು 2015-16 ನೇ ಸಾಲಿನಿಂದ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಕೃಷಿ ಸಚಿವ ಕೃಷ್ಣಬೈರೇಗೌಡ ಅವರು ತಿಳಿಸಿದರು.