ಕೆಪಿಎಸ್’ಸಿ ಪರೀಕ್ಷಾ ಅಕ್ರಮದ ಜಾಲವೊಂದು ಪತ್ತೆಯಾಗಿದೆ.  ಈ ಸಂಬಂಧ ಚಂದ್ರಕಾಂತ್ ಎನ್ನುವವರು ಸೇರಿ ಹಲವರನ್ನು ಕಲಬುರಗಿಯ ಅಫ್ಜಲ್’ಪುರ ಪೊಲೀಸರು ಬಂಧಿಸಿದ್ದಾರೆ.

ಕಲಬುರಗಿ : ಕೆಪಿಎಸ್’ಸಿ ಪರೀಕ್ಷಾ ಅಕ್ರಮದ ಜಾಲವೊಂದು ಪತ್ತೆಯಾಗಿದೆ. ಈ ಸಂಬಂಧ ಚಂದ್ರಕಾಂತ್ ಎನ್ನುವವರು ಸೇರಿ ಹಲವರನ್ನು ಕಲಬುರಗಿಯ ಅಫ್ಜಲ್’ಪುರ ಪೊಲೀಸರು ಬಂಧಿಸಿದ್ದಾರೆ.

ಇನ್ನೋರ್ವ ಆರೋಪಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದ ಮೊಹಮದ್ ನದಾಫ್ ಎನ್ನುವಾತ ಪರಾರಿಯಾಗಿದ್ದಾನೆ. ಅಲ್ಲದೇ ಉಳಿದ ಆರೋಪಿಗಳಿಗಾಗಿ ಶೋಧ ನಡೆಸಲಾಗುತ್ತಿದೆ.

ಉದ್ಯೋಗಾಕಾಂಕ್ಷಿಗಳಿಂದ ಲಕ್ಷಾಂತರ ರು. ಹಣವನ್ನು ಪಡೆಯುತ್ತಿದ್ದ ಗ್ಯಾಂಗ್ ಸೂಕ್ಷ್ಮ ಇಯರ್ ಫೋನ್ ಮೂಲಕ ಪರೀಕ್ಷೆಯಲ್ಲಿ ಉತ್ತರಗಳನ್ನು ನೀಡುತ್ತಿದ್ದರು. ಪ್ರತೀ ಹುದ್ದೆಗೆ 10 ರಿಂದ 12 ಲಕ್ಷ ರು.ಗಳನ್ನು ಪಡೆಯುತ್ತಿದ್ದರು ಎನ್ನಲಾಗಿದೆ.

ಈ ಗ್ಯಾಂಗ್ ಇದುವರೆಗೆ 450ಕ್ಕೂ ಅಧಿಕ ಮಂದಿಗೆ ಉದ್ಯೋಗವನ್ನು ಕೊಡಿಸಿದೆ ಎನ್ನುವ ವಿಚಾರ ದೀಗ ಬೆಳಕಿಗೆ ಬಂದಿದೆ. ಕಳೆದ ತಿಂಗಳು ನಡೆದ ಫ್ಡಿಎ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎನ್ನುವ ರೋಪದ ಮೇರೆಗೆ ಪೊಲೀಸರು ವಿಚಾರಣೆಯನ್ನು ಆರಂಭಿಸಿದ್ದರು.