Asianet Suvarna News Asianet Suvarna News

ಇಂದು ಕರ್ನಾಟಕ ಪ್ರಿಮಿಯರ್ ಲೀಗ್ ಆಟಗಾರರ ಬಿಡ್: ಆಟಗಾರರಿಗೆ ನಿಗದಿಪಡಿಸಿರುವ ಮೂಲಬೆಲೆ ಎಷ್ಟು ಗೊತ್ತಾ?

ಕೆಪಿಎಲ್ 6ನೇ ಆವೃತ್ತಿಗೆ ಆಟಗಾರರ ಬಿಡ್ ಇಂದು ನಡೆಯುಯಲಿದೆ. ಬೆಳಗ್ಗೆ 11 ಗಂಟೆಯಿಂದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಬಿಡ್ ನಡೆಯಲಿದೆ. ಒಟ್ಟು 215 ಆಟಗಾರರನ್ನು ಎರಡು ಗ್ರೂಪ್​'ಗಳಾಗಿ ವಿಂಗಡಿಸಲಾಗಿದೆ.

KPL Bidding will be today

ಬೆಂಗಳೂರು(ಆ.06): ಕೆಪಿಎಲ್ 6ನೇ ಆವೃತ್ತಿಗೆ ಆಟಗಾರರ ಬಿಡ್ ಇಂದು ನಡೆಯುಯಲಿದೆ. ಬೆಳಗ್ಗೆ 11 ಗಂಟೆಯಿಂದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಬಿಡ್ ನಡೆಯಲಿದೆ. ಒಟ್ಟು 215 ಆಟಗಾರರನ್ನು ಎರಡು ಗ್ರೂಪ್​'ಗಳಾಗಿ ವಿಂಗಡಿಸಲಾಗಿದೆ.

ಎ ಗ್ರೂಪ್ ಆಟಗಾರರಿಗೆ 50 ಸಾವಿರ ಮೂಲ ಬೆಲೆ ನಿಗದಿಪಡಿಸಲಾಗಿದೆ. ಬಿ ಗ್ರೂಪ್ ಆಟಗಾರರಿಗೆ 20 ಸಾವಿರ ರೂಪಾಯಿ ನಿಗದಿಪಡಿಸಲಾಗಿದೆ. 7 ಪ್ರಾಂಚೈಸಿಗಳಿಗೂ 30 ಲಕ್ಷ ರೂಪಾಯಿ ನೀಡಲಾಗಿದೆ.

ಈ ಮೊತ್ತದಲ್ಲೇ ಆಟಗಾರರನ್ನು ಖರೀದಿಸಬೇಕಿದೆ. ಇನ್ನು ಎಲ್ಲಾ ಆಟಗಾರರನ್ನು ಬಿಡ್'​ಗೆ ಇಡಲಾಗಿದೆ. ಹೀಗಾಗಿ ಕರ್ನಾಟಕದ ಸ್ಟಾರ್ ಪ್ಲೇಯರ್​ಗಳಾದ ವಿನಯ್ ಕುಮಾರ್​, ಮನೀಶ್ ಪಾಂಡೆ, ಕರುಣ್ ನಾಯರ್, ಕೆಎಲ್ ರಾಹುಲ್, ಎಷ್ಟು ಮೊತ್ತಕ್ಕೆ ಸೇಲ್ ಆಗ್ತಾರೆ ಅನ್ನೋ ಕುತೂಹಲವಿದೆ.

 

Follow Us:
Download App:
  • android
  • ios