ಪ್ರಧಾನಿ ಮೋದಿ ನಾಳೆ ಮೈಸೂರಿಗೆ ಬರ್ತಾರೆ ಅದೇನು ಸುಳ್ಳು ಹೇಳುತ್ತಾರೋ ಗೊತ್ತಿಲ್ಲ. ಶೇ. 10 ರಷ್ಟು ಸರ್ಕಾರ ಅಂತಾರೆ. ನಾವು ಯಾವ ಯೋಜನೆಯಲ್ಲಿ ಎಷ್ಟು ದುಡ್ಡು ಹೊಡೆದಿದ್ದೇವೆ ಎಂದು ನಾಳೆ ಮೈಸೂರಿನಲ್ಲಿ ಅವರು ಬಹಿರಂಗಪಡಿಸಲಿ. ಇಲ್ಲದಿದ್ರೆ ಈ ದೇಶದ ಪ್ರಧಾನಿ ಸುಳ್ಳುಗಾರ ಅಂತಾ ಹೇಳಬೇಕಾಗುತ್ತೆ ಎಂದು ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ತುಮಕೂರು (ಫೆ. 17): ಪ್ರಧಾನಿ ಮೋದಿ ನಾಳೆ ಮೈಸೂರಿಗೆ ಬರ್ತಾರೆ ಅದೇನು ಸುಳ್ಳು ಹೇಳುತ್ತಾರೋ ಗೊತ್ತಿಲ್ಲ. ಶೇ. 10 ರಷ್ಟು ಸರ್ಕಾರ ಅಂತಾರೆ. ನಾವು ಯಾವ ಯೋಜನೆಯಲ್ಲಿ ಎಷ್ಟು ದುಡ್ಡು ಹೊಡೆದಿದ್ದೇವೆ ಎಂದು ನಾಳೆ ಮೈಸೂರಿನಲ್ಲಿ ಅವರು ಬಹಿರಂಗಪಡಿಸಲಿ. ಇಲ್ಲದಿದ್ರೆ ಈ ದೇಶದ ಪ್ರಧಾನಿ ಸುಳ್ಳುಗಾರ ಅಂತಾ ಹೇಳಬೇಕಾಗುತ್ತೆ ಎಂದು ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮೋದಿ 2 ಕೋಟಿ ಉದ್ಯೋಗ ಕೊಡಿಸ್ತೀನಿ ಎಂದಿದ್ದರು. ಬರಿ 4 ಲಕ್ಷ ಉದ್ಯೋಗ ಸಾಧ್ಯವಾಯ್ತು. ಮಜ್ಜಿಗೆ ಕುಡಿದ್ರು 18 ಪರ್ಸೆಂಟ್ ಟ್ಯಾಕ್ಸ್ ಕಟ್ಟಬೇಕು. ಜಿಎಸ್ ಟಿಯಿಂದ ಜನರ ಬದುಕು ದುರ್ಬರವಾಗಿದೆ. ವಿದೇಶಕ್ಕೆ ಮೋದಿ ಹೋದಾಗ ಅಲ್ಲಿನ ಭಾರತೀಯ ಡಾಕ್ಟರ್, ಇಂಜಿನಿಯರ್ಗಳು ಮೋದಿ ಅವರಿಗೆ ಸ್ವಾಗತ ಮಾಡಿದ್ರು. ಅವರು ಕಾಂಗ್ರೆಸ್'ನವರು ತಯಾರು ಮಾಡಿ ಕಳುಹಿಸಿದ ಡಾಕ್ಟರ್, ಇಂಜಿನಿಯರ್'ಗಳು. ಅದು ಮೋದಿಗೆ ಅರಿವಿರಲಿ ಎಂದು ಟೀಕಿಸಿದ್ದಾರೆ.
ಕಾಮಗಾರಿ ಗುತ್ತಿಗೆಯಲ್ಲೂ ಪರಿಶಿಷ್ಟ ಜಾತಿಗೆ ಮೀಸಲಾತಿ ಕೊಟ್ಟಿದ್ದೇವೆ. ಆದರೂ ಅವರು ನಮಗೇ ಏನೂ ಮಾಡಿಲ್ಲ ಅಂತಾರೆ. ಅದು ನನಗೆ ಅರ್ಥವಾಗ್ತಾ ಇಲ್ಲ ಎಂದು ಪರಂ ಬೇಸರ ವ್ಯಕ್ತಪಡಿಸಿದ್ದಾರೆ.
