ಬೆಂಗಳೂರು [ಜು.19] : ರಾಜ್ಯ ರಾಜಕೀಯದಲ್ಲಿ ವಿಶ್ವಾಸಮತಕ್ಕೆ ಡೆಡ್ ಲೈನ್ ನೀಡಿದ್ದ ರಾಜ್ಯಪಾಲರ ವಿರುದ್ಧ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಗರಂ ಆಗಿದ್ದಾರೆ. 

ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲು ರಾಜ್ಯಪಾಲರು ವೇದಿಕೆ ಸಿದ್ಧಮಾಡುತ್ತಿದ್ದಾರೆ ಎಂದು ಟ್ವೀಟ್ ಮಾಡುವ ಮೂಲಕ ಗಂಭೀರ ಆರೋಪ ಮಾಡಿದ್ದಾರೆ. 

ರಾಜ್ಯದಲ್ಲಿ ವಿಶ್ವಾಸಮತ ಯಾಚನೆ ಮಾಡಲು ಸೂಚಿಸುವ ಅಧಿಕಾರ ರಾಜ್ಯಪಾಲರಿಗೆ ಇಲ್ಲ. ಆದರೆ ಅವರು ಡೆಡ್ ಲೈನ್ ನೀಡುವ ಮೂಲಕ ಬಿಜೆಪಿ ಅಜೆಂಡಾವನ್ನು ಜಾರಿ ಮಾಡುತ್ತಿದ್ದಾರೆ. ಹಿಂದೆ ಯಡಿಯೂರಪ್ಪಗೆ 15 ದಿನ ಸಮಯಕೊಟ್ಟಿದ್ದವರು ಈಗ ಕಾನೂನು ಮೀರಿ ಸೂಚನೆ ನೀಡುತ್ತಿದ್ದಾರೆ ಎಂದರು. 

ಕರ್ನಾಟಕ ರಾಜಕೀಯದ ಸುದ್ದಿಗಳಿಗೆ ಇಲ್ಲಿ ಕ್ಲಿಕ್ಕಿಸಿ

ಅತೃಪ್ತರಾಗಿ ಹೊರನಡೆದಿರುವ ರೆಬೆಲ್ ಶಾಸಕರು ಹರಕೆಯ ಕುರಿಗಳಾಗುತ್ತಿದ್ದಾರೆ.  ರಾಜ್ಯಪಾಲರ ವರ್ತನೆ ಸಂಶಯ ಮೂಡಿಸಿದೆ ಎಂದು ಸರಣಿ ಟ್ವೀಟ್ ಮಾಡುವ ಮೂಲಕ ರಾಜ್ಯಪಾಳರ ವಿರುದ್ಧ ಹರಿಹಾಯ್ದಿದ್ದಾರೆ.