ರಾಹುಲ್ ಭೇಟಿಯಾದ ಕೆಪಿಸಿಸಿ ನೂತನ ಅಧ್ಯಕ್ಷದಿನೇಶ್ ಗುಂಡೂರಾವ್ ಗೆ ಈಶ್ವರ್ ಖಂಡ್ರೆ ಸಾಥ್ಲೋಕಸಭೆ ಚುನಾಣೆಗೆ ಸಜ್ಜಾಗಲು ರಾಹುಲ್ ಕರೆಬಿಜೆಪಿ ಮಣಿಸುವುದೊಂದೇ ಗುಂಡೂರಾವ್ ಆದ್ಯತೆ

ನವದೆಹಲಿ(ಜು.10): ಕೆಪಿಸಿಸಿ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ದಿನೇಶ್ ಗುಂಡೂರಾವ್ ಮತ್ತು ನೂತನ ಕಾರ್ಯಾಧ್ಯಕ್ಷ ಿಶ್ವರ್ ಖಂಡ್ರೆ, ಇಂದು ನವದೆಹಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಇದೇ ಮೊದಲ ಬಾರಿಗೆ ರಾಹುಲ್ ಅವರನ್ನು ಬೇಟಿಯಾದ ದಿನೇಶ್ ಗುಂಡೂರಾವ್, ರಾಹುಲ್ ಜೊತೆ ಹಲವು ಮಹತ್ವದ ವಿಷಯಗಳ ಕುರಿತು ಮಾತುಕತೆ ನಡೆಸಿದರು ಎಂದು ಮೂಲಗಳು ತಿಳಿಸಿವೆ.

ರಾಹುಲ್ ಜೊತೆಗಿನ ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ದಿನೇಶ್ ಗುಂಡೂರಾವ್, ಲೋಕಸಭೆ ಚುನಾವಣೆಗೆ ಸಜ್ಜಾಗಿ ಎಂದು ರಾಹುಲ್ ತಮಗೆ ಸೂಚಿಸಿದ್ದಾರೆ ಎಂದು ತಿಳಿಸಿದರು. ಬೇರು ಮಟ್ಟದಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡಿ ಆ ಮೂಲಕ ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲುವಂತೆ ಯೋಜನೆ ರೂಪಿಸುವುದಾಗಿ ಗುಂಡೂರಾವ್ ಹೇಳಿದರು. ಎಲ್ಲ ನಾಯಕರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುವಂತೆ ರಾಹುಲ್ ತಮಗೆ ಸಲಹೆ ನೀಡಿದ್ದು, ಅದರಂತೆ ಎಲ್ಲ ನಾಯಕರ ಭರವಸೆ ಗಳಿಸುವುದಾಗಿ ಗುಂಡೂರಾವ್ ವಿಶ್ವಾಸ ವ್ಯಕ್ತಪಡಿಸಿದರು. 

ಇದೇ ವೇಳೆ ಪಕ್ಷದ ಅಧ್ಯಕ್ಷರಾಗಲು ತಮಗೆ ಅನುಭವ ಇಲ್ಲ ಎಂಬ ಮಾತುಗಳು ಕೇಳಿ ಬರುತ್ತಿರುವ ಕುರಿತು ಪ್ರತಿಕ್ರಿಯಿಸಿರುವ ದಿನೇಶ್, ತಮಗೂ ೪೮ ವರ್ಷ ವಯಸ್ಸಾಗಿದ್ದು, ರಾಜಕಾರಣದ ಅನುಭವ ಇದೆ ಎಂದು ಹೇಳಿದರು. ಸದ್ಯ ಜಾತ್ಯಾತೀತ ಶಕ್ತಿಗಳನ್ನು ಒಗ್ಗೂಡಿಸಿ ಬಿಜೆಪಿಯನ್ನು ಮಣಿಸುವುದು ತಮ್ಮ ಮೊದಲ ಆದ್ಯತೆಯಾಗಿದ್ದು, ಅದರಂತೆ ಯೋಜನೆ ರೂಪಿಸುವುದಾಗಿ ದಿನೇಶ್ ಗುಂಡೂರಾವ್ ಹೇಳಿದರು.