ಸಿಡಿಲು ಬಡಿದು ಮಾಜಿ ಶಾಸಕ ಕೋನರೆಡ್ಡಿ ಸಹೋದರ ಸಾವು ಚಿಲಕವಾಡ ಗ್ರಾಮದಲ್ಲಿ ಸಿಡಿಲು ಬಡಿದ ಪರಿಣಾಮ ಸಾವು

​​​ಧಾರವಾಡ: ​ಸಿಡಿಲು ಬಡಿದು ಮಾಜಿ ಶಾಸಕ ಕೋನರೆಡ್ಡಿ ಸಹೋದರ ಸಾವನಪ್ಪಿದ್ದಾರೆ.

ಚಿಲಕವಾಡ ಗ್ರಾಮದಲ್ಲಿ ಸಿಡಿಲು ಬಡಿದ ಪರಿಣಾಮ ಎನ್.ಎಚ್.ಕೋನರೆಡ್ಡಿ ಸಹೋದರ ವೆಂಕಪ್ಪ ಕೋನರೆಡ್ಡಿ(48) ಮೃತಪಟ್ಟಿದ್ದಾರೆ.

ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ಚಿಲಕವಾಡ ಗ್ರಾಮದಲ್ಲಿ ಘಟನೆ ನಡೆದಿದ್ದು, ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸಿಡಿಲು ಬಡಿದಿದೆ. 

ರಾಜ್ಯಕ್ಕೆ ಮುಂಗಾರು ಪ್ರವೇಶಿಸಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಭಾರೀ ಮಳೆಯಾಗುತ್ತಿದೆ.