ಒಂದೇ ದಿನದಲ್ಲಿ ಎರಡೆರಡು ಸಾರಿ ಸತ್ತ ಮಹಿಳೆ !

First Published 16, Jun 2018, 3:08 PM IST
Kolkata woman dies twice on the same day
Highlights

ಒಂದೇ ದಿನದಲ್ಲಿ ಎರಡೆರಡು ಬಾರಿ ಸಾಯಲು ಸಾಧ್ಯವೇ? ಇಲ್ಲ ತಾನೆ.. ಆದರೆ ಇದು ಸಾಧ್ಯ ಎಂದು  ಮಹಿಳೆಯೊಬ್ಬಳು ಸಾಬೀತು ಮಾಡಿ ಅಂತಿಮವಾಗಿ ಸತ್ತುಹೋಗಿದ್ದಾಳೆ! ಸುದ್ದಿ ನಿಮಗೆ ಅರ್ಥವಾಗದೆ ಇರಬಹುದು. ಆದರೆ ಈ ಸ್ಟೋರಿಯನ್ನು ಪೂರ್ತಿ ಓದಿದಾಗ ಮಹಿಳೆಯ ಸಾವಿನ ಕತೆ ಗೊತ್ತಾಗುತ್ತದೆ.

ಕೋಲ್ಕತ್ತಾ (ಜೂನ್ 16) ಒಂದೇ ದಿನದಲ್ಲಿ ಎರಡೆರಡು ಬಾರಿ ಸಾಯಲು ಸಾಧ್ಯವೇ? ಇಲ್ಲ ತಾನೆ.. ಆದರೆ ಇದು ಸಾಧ್ಯ ಎಂದು  ಮಹಿಳೆಯೊಬ್ಬಳು ಸಾಬೀತು ಮಾಡಿ ಅಂತಿಮವಾಗಿ ಸತ್ತುಹೋಗಿದ್ದಾಳೆ! ಸುದ್ದಿ ನಿಮಗೆ ಅರ್ಥವಾಗದೆ ಇರಬಹುದು. ಆದರೆ ಈ ಸ್ಟೋರಿಯನ್ನು ಪೂರ್ತಿ ಓದಿದಾಗ ಮಹಿಳೆಯ ಸಾವಿನ ಕತೆ ಗೊತ್ತಾಗುತ್ತದೆ.

ಕೋಲ್ಕತ್ತಾದ 55 ಮಹಿಳೆ ಸಿಬಾನಿ ಬಿಸ್ವಾಸ್ ಒಂದೇ ದಿನದಲ್ಲಿ ಎರಡೆರಡು ಸಾರಿ ಸತ್ತಿದ್ದಾಳೆ. ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ಸಾವನ್ನಪ್ಪಿದ್ದಾಳೆ ಎಂದು ಆರ್ ಜಿ ಕರ್ ಆಸ್ಪತ್ರೆ ವೈದ್ಯರು ಹೇಳಿದ್ದರು.  ನಂತರ ಕುಟುಂಬಸ್ಥರು ಮಹಿಳೆಯ ಅಂತಿಮ ಸಂಸ್ಕಾರ ಕ್ಕೆ ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಈ ವೇಳೆ ಮಹಿಳೆ ಉಸಿರಾಡುತ್ತಿರುವುದು ಗಮನಕ್ಕೆ ಬಂದಿದೆ.

ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯುವ ಯತ್ನ ಮಾಡಲಾಯಿತು. ಆದರೆ ಆಸ್ಪತ್ರೆ ಸೇರುವ ವೇಳೆ ಮಹಿಳೆ ಮೃತಪಟ್ಟಿದ್ದಳು. ಹಾಗಾಗಿ ಮತ್ತೊಮ್ಮೆ ಪರೀಕ್ಷೆ ಮಾಡಿದ ವೈದ್ಯರು ಮಹಿಳೆ ನಿಧನವಾಗಿದ್ದಾಳೆ ಎಂದು ಶರಾ ಬರೆದರು. 

 

loader