ಹಲವು ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿಯಾಗುತ್ತಿರುವ ಭೋಪಾಲ್‌ನ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಞಾ ಸಿಂಗ್‌ ಠಾಕೂರ್‌ ಅವರು ಹೇಳಿದ್ದಾರೆನ್ನಲಾದ ಮತ್ತೊಂದು ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. 

‘ಇತ್ತೀಚೆಗೆ ಕ್ಯಾನ್ಸರ್‌ನಿಂದ ಗೋವಾ ಮುಖ್ಯಮಂತ್ರಿ ಮನೋಹರ್‌ ಪರ್ರಿಕರ್‌ ಸಾವನ್ನಪ್ಪಿದರು. ಇದಕ್ಕೆ ಪ್ರಮುಖ ಕಾರಣ ಅವರು ರಾಜ್ಯದಲ್ಲಿ ಗೋ ಮಾಂಸ ಸೇವನೆಗೆ ಅವಕಾಶ ಮಾಡಿಕೊಟ್ಟಿದ್ದು. ಗೋಮೂತ್ರ ಸೇವನೆಯಿಂದ ನನ್ನಗಿದ್ದ ಕ್ಯಾನರ್‌ ಗುಣಮುಖವಾಗಿದೆ. ಪರ್ರಿಕ್ಕರ್‌ ಗೋಮಾತೆಗೆ ಗೌರವ ನೀಡದ ಕಾರಣ ಮೃತಪಟ್ಟರು’ ಎಂದು ಸಾಧ್ವಿ ಪ್ರಜ್ಞಾ ಹೇಳಿದ್ದಾರೆನ್ನಲಾದ ಹೇಳಿಕೆ ವೈರಲ್‌ ಆಗುತ್ತಿದೆ.

ಆದರೆ ನಿಜ್ಕಕೂ ಸಾಧ್ವೀ ಈ ಹೇಳಿಕೆ ನೀಡಿದ್ದರೇ ಎಂದು ಪರಿಶೀಲಿಸಿದಾಗ, ಇದೊಂದು ಸುಳ್ಳುಸುದ್ದಿ ಎಂದು ತಿಳಿದುಬಂದಿದೆ. ಪರ್ರಿಕ್ಕರ್‌ ಬಗ್ಗೆ ಈ ರೀತಿಯ ಯಾವುದೇ ಹೇಳಿಕೆ ನೀಡಿಲ್ಲ. ಅವರ ಹೇಳಿಕೆಯನ್ನು ತಿರುಚಿ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ.

ಇದೇ ಏಪ್ರಿಲ್‌ 26ರಂದು ಮಧ್ಯಪ್ರದೇಶದಲಿ ಮಾತನಾಡಿದ್ದ ಅವರು, ‘ಈಶಾನ್ಯದಲ್ಲಿ ಗೋ ಮಾಂಸ ಮಾರಾಟ ನಿಷೇಧಿಸಲು ಬಿಜೆಪಿ ಚಿಂತನೆ ನಡೆಸುತ್ತಿದೆ. ಗೋವಾ ಸೇರಿದಂತೆ ಇತರೆ ದಕ್ಷಿಣದ ರಾಜ್ಯಗಳಲ್ಲಿ ಗೋ ಮಾಂಸ ಮಾರಾಟಕ್ಕೆ ಅವಕಾಶವಿದೆ’ ಎಂದಿದ್ದರು. ಅಲ್ಲದೆ ಈ ಬಗ್ಗೆ ಯಾವುದೇ ಸುದ್ದಿ ಮಾಧ್ಯಮಗಳೂ ವರದಿ ಮಾಡಿಲ್ಲ. ಠಾಕೂರ್‌ ಸಹಾಯಕ, ಉಮೇಶ್‌ ಶ್ರೀವಾತ್ಸವ್‌ ಈ ಬಗ್ಗೆ ಬೂಮ್‌ಗೆ ಪ್ರತಿಕ್ರಿಯೇ ನಿಡಿದ್ದು, ‘ಈ ಹೇಳಿಕೆ ಸಂಪೂರ್ಣ ಸತ್ಯಕ್ಕೆ ವಿರುದ್ಧವಾಗಿದೆ. ಸಾಧ್ವಿಯವರ ಘನತೆ ಕುಂದುಂಟುಮಾಡುವ ಉದ್ದೇಶದಿಂದ ಈ ರೀತಿ ಸುಳ್ಳು ಸುದ್ದಿ ಹರಡಲಾಗುತ್ತಿದೆ’ ಎಂದಿದ್ದಾರೆ.

- ವೈರಲ್ ಚೆಕ್