ಇಂದಿನಿಂದ ಪ್ರತಿ ಲೀಟರ್ ನಂದಿನಿ ಹಾಲು ಮತ್ತು ಮೊಸರಿಗೆ 2 ರೂಪಾಯಿ ಹೆಚ್ಚುವರಿಯಾಗಿ ಗ್ರಾಹಕರು ಭರಿಸಬೇಕಿದೆ.

ಬೆಂಗಳೂರು(ಎ.01): ಇಂದಿನಿಂದ ಪ್ರತಿ ಲೀಟರ್ ನಂದಿನಿ ಹಾಲು ಮತ್ತು ಮೊಸರಿಗೆ 2 ರೂಪಾಯಿ ಹೆಚ್ಚುವರಿಯಾಗಿ ಗ್ರಾಹಕರು ಭರಿಸಬೇಕಿದೆ.

ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿರ್ಧರದಂತೆ ಪರಿಷ್ಕೃತ ಹಾಲಿನ ದರವನ್ನು ಮೊನ್ನೆ ಪ್ರಕಟಿಸಿತ್ತು. ಅದರಂತೆ ಪರಿಷ್ಕೃತ ದರ ಇಂದಿನಿಂದ ಜಾರಿಯಾಗಿದೆ. ಸಾಮಾನ್ಯ ಹಾಲು ಲೀಟರ್'​ಗೆ 33 ರೂಪಾಯಿ ಕೊಡುತ್ತಿದ್ದ ಗ್ರಾಹಕರು ಇಂದಿನಿಂದ 35 ರೂಪಾಯಿ ನೀಡಿ ಖರೀದಿಸಬೇಕು.

ಕಚ್ಚಾ ವಸ್ತುಗಳ ಬೆಲೆ ಏರಿಕೆ, ಹಾಲು ಉತ್ಪಾದನಾ ವೆಚ್ಚ ಹೆಚ್ಚಳ ಹಾಗೂ ತೀವ್ರ ಬರಗಾಲದಿಂದ ತತ್ತರಿಸಿರುವ ರೈತರಿಗೆ ಸ್ವಂಧಿಸುವ ನಿಟ್ಟಿನಲ್ಲಿ ಕೆಎಂಎಫ್ ಹಾಲಿನ ದರ ಪರಿಷ್ಕರಣೆ ಮಾಡಿದ್ದಾಗಿ ಹೇಳಿಕೊಂಡಿದೆ. ಅಲ್ಲದೇ ಹೆಚ್ಚಳವಾದ ಹಾಲಿನ ದರದಲ್ಲಿ 1.50 ಪೈಸೆ ರೈತರಿಗೆ ಹಾಗೂ 50 ಪೈಸೆ ಒಕ್ಕೂಟಗಳ ನಿರ್ವಹಣೆಗೆ ನೀಡಲು ಕೆಎಂಎಫ್ ನಿರ್ಧರಿಸಿದೆ.