ಇನ್ನು ಜೇಸುದಾಸ್ ಶಿಷ್ಯರು ಒಂದು ದಿನ ಮುನವೇ ಕ್ಷೇತ್ರಕ್ಕೆ ಬಂದು ತಂಗಿ ಜೇಸುದಾಸ್ ಗೆ ಶುಭ ಹಾರೈಸಿ ಗಾಯನ ನಡೆಸಿಕೊಡುತ್ತಾರೆ. ಕೊನೆಗೆ ಜೇಸುದಾಸ್ ಇವರ ಜೊತೆಗೂಡಿ ತಾವೂ ಹಾಡುತ್ತಾರೆ.
ಉಡುಪಿ(ಜ.10): ಗಾನ ಗಾರುಡಿಗ ಕೆ.ಜೆ.ಏಸುದಾಸ್ ಇಂದು 77 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಎಂದಿನಂತೆ ತಮ್ಮ ಹುಟ್ಟುಹಬ್ಬದ ಸಂಭ್ರಮವನ್ನು ಉಡುಪಿಯ ಕೊಲ್ಲೂರು ಮುಕಾಂಬಿಕಾ ಸನ್ನಿಧಿಯಲ್ಲಿ, ಗಾನ ಸೇವೆಯ ಮೂಲಕ ಆಚರಿಸಿಕೊಂಡರು. ವರ್ಷಂಪ್ರತಿ ಪತ್ನಿ ಮತ್ತು ಕುಟುಂಬ ಸದಸ್ಯರೊಡಗೂಡಿ ಶ್ರೀ ಕ್ಷೇತ್ರದಲ್ಲಿ ಪೂಜೆ, ಹೋಮ ಹವನ ನಡೆಸುತ್ತಾರೆ. ಇಂದು ಕೂಡಾ ದೇವಿ ಸನ್ನಿಧಿಯಲ್ಲಿ ಚಂಡಿಕಾ ಹೋಮ ನಡೆಸಿದರು. ಬಳಿಕ ದೇವಾಲಯ ಆವರಣದಲ್ಲಿ ಗಾಯನ ಸೇವೆ ನಡೆಸಿದರು. ಜೇಸುದಾಸ್ ಆಗಮನದ ಸುದ್ದಿ ತಿಳಿದ ಅಭಿಮಾನಿಗಳು ದೇವಾಲಯದಲ್ಲಿ ಜಮಾಯಿಸಿದ್ದರು
ಜೇಸುದಾಸ್ ಹುಟ್ಟು ಹಬ್ಬ ಆಚರಿಸಲು ಕೊಲ್ಲೂರಿಗೆ ಬರುತ್ತಾರೆ ಅನ್ನೋದನ್ನು ತಿಳಿದು ದೇಶದ ನಾನಾಭಾಗಗಳಿಂದ ಅವರ ಅಭಿಮಾನಿಗಳು ಕೂಡಾ ಕೊಲ್ಲೂರಿಗೆ ಬರುತ್ತಾರೆ. ದೇವಾಲಯದ ಆವರಣದಲ್ಲಿ ಕಾದು ಕುಳಿತು ಅವರ ಗಾಲ ಲಹರಿಯಲ್ಲಿ ತಲ್ಲೀನರಾಗುತ್ತಾರೆ. ಇನ್ನು ಜೇಸುದಾಸ್ ಶಿಷ್ಯರು ಒಂದು ದಿನ ಮುನವೇ ಕ್ಷೇತ್ರಕ್ಕೆ ಬಂದು ತಂಗಿ ಜೇಸುದಾಸ್ ಗೆ ಶುಭ ಹಾರೈಸಿ ಗಾಯನ ನಡೆಸಿಕೊಡುತ್ತಾರೆ. ಕೊನೆಗೆ ಜೇಸುದಾಸ್ ಇವರ ಜೊತೆಗೂಡಿ ತಾವೂ ಹಾಡುತ್ತಾರೆ.
ಸಂತಾನ ವಿಲ್ಲದೆ ಕೊರಗುತ್ತಿದ್ದ ಜೇಸುದಾಸ್ ಕೊಲ್ಲೂರು ಕ್ಷೇತ್ರದಲ್ಲಿ ಪೂಜೆ ಸಲ್ಲಿಸಿದ ನಂತರ ಸಂತಾನ ಪಡೆದರಂತೆ. ಅಂದಿನಿಂದ ಈವರೆಗೂ ಚಾಚೂ ತಪ್ಪದೆ ಕ್ಷೇತ್ರದಲ್ಲೇ ಹುಟ್ಟುಹಬ್ಬ ಆಚರಿಸುತ್ತಾ ಬಂದಿದ್ದಾರೆ. ಇದು ವರ್ಷಂಪ್ರತಿ ತಪ್ಪದೇ ನಡೆಯುವ ಸಂಪ್ರದಾಯ. ಮೇರು ಗಾಯಕನ ಈ ಸರಳಜೀವನ ಮತ್ತು ಭಕ್ತಿ ಒಂದು ಅಚ್ಚರಿಯೇ ಸರಿ.
