ರಾಜ್ಯ ಸರ್ಕಾರದ ವತಿಯಿಂದ ಇದೇ ಮೊದಲ ಬಾರಿಗೆ ರಾಣಿ ಕಿತ್ತೂರು ರಾಣಿ ಚೆನ್ನಮ್ಮಳ ಜಯಂತಿ ಆಚರಣೆ ಮಾಡಲಾಗುತ್ತಿದೆ.

ಬೆಂಗಳೂರು (ಅ.22): ರಾಜ್ಯ ಸರ್ಕಾರದ ವತಿಯಿಂದ ಇದೇ ಮೊದಲ ಬಾರಿಗೆ ರಾಣಿ ಕಿತ್ತೂರು ರಾಣಿ ಚೆನ್ನಮ್ಮಳ ಜಯಂತಿ ಆಚರಣೆ ಮಾಡಲಾಗುತ್ತಿದೆ.

ನಾಳೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್’ನಲ್ಲಿ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಪಂಚಮಸಾಲಿ ಪೀಠದ ಜಗದ್ಗುರು ಜಯಮೃತ್ಯುಂಜಯ ಸ್ವಾಮೀಜಿ, ಸಚಿವರಾದ ಎಂ ಬಿ ಪಾಟೀಲ್, ವಿನಯ ಕುಲಕರ್ಣಿ ಸೇರಿ ಶಾಸಕರು,ಸಮಾಜದ ಇತರೆ ಗಣ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಚನ್ನಮ್ಮ ಜಯಂತಿಯನ್ನು ಸರ್ಕಾರದ ಮೂಲಕವೇ ಆಚರಿಸಬೇಕು ಅನ್ನೋ ಒತ್ತಾಯ ಬಹಳ ವರ್ಷಗಳಿಂದ ಕೇಳ ಬರುತ್ತಲೇ ಇತ್ತು. ಇದೀಗ ಮೊದಲ ಬಾರಿ ಸರ್ಕಾರದ ವತಿಯಿಂದ ರಾಣಿ ಚೆನ್ನಮ್ಮಳ ಜಯಂತೋತ್ಸವ ನಡೆಯಲಿದೆ.