ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್ ತಂಡ ಪುಟ್ಟ ಮಕ್ಕಳಲ್ಲಿ ಅಡಗಿರುವ ಪ್ರತಿಭೆಗೆ ವೇದಿಕೆ ಕಲ್ಪಿಸುವ ವಿನೂತನ ಪ್ರಯತ್ನ ಮಾಡಿತ್ತು. ಈ ಮೂಲಕ ಕಿರಿಯ ಸಂಪಾದಕ ಸ್ಪರ್ಧೆ ಮೂಲಕ ವಿದ್ಯಾರ್ಥಿಗಳನ್ನು ಪಠ್ಯೇತರ ಚಟುವಟಿಕೆಗೆ ಒರೆ ಹಚ್ಚಿತ್ತು.
ಬೆಂಗಳೂರು(ಫೆ.26): ತೀವ್ರ ಕುತೂಹಲ ಕೆರಳಿಸಿದ್ದ ಕೆಎಂಎಫ್ ಪ್ರಾಯೋಜಕತ್ವದ ಸುವರ್ಣ ನ್ಯೂಸ್ ಹಾಗೂ ಕನ್ನಡ ಪ್ರಭದ ಕಿರಿಯ ಸಂಪಾದಕರು ಯಾರು ಅನ್ನೋ ಕುತೂಹಲಕ್ಕೆ ತೆರೆ ಬಿದ್ದಿದೆ. ಕಿರಿಯ ಸಂಪಾದಕರ ಪ್ರಥಮ ಬಹುಮಾನ ಮೈಸೂರಿನ ಸಾನ್ವಿ ಆರ್. ಪ್ರಭುಗೆ ಸಿಕ್ಕಿದೆ. ಅದೇ ರೀತಿ ದ್ವಿತೀಯ ಬಹುಮಾನ ಹುಬ್ಬಳ್ಳಿಯ ಧನ್ಯ ವಿ.ಜೈನ್ ಹಾಗೂ ತೃತೀಯ ಬಹುಮಾನ ಉಡುಪಿಯ ಅನುಷಾ ನಾಯ್ಕ್ ಪಡೆದುಕೊಂಡಿದ್ದಾರೆ.
ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್ ತಂಡ ಪುಟ್ಟ ಮಕ್ಕಳಲ್ಲಿ ಅಡಗಿರುವ ಪ್ರತಿಭೆಗೆ ವೇದಿಕೆ ಕಲ್ಪಿಸುವ ವಿನೂತನ ಪ್ರಯತ್ನ ಮಾಡಿತ್ತು. ಈ ಮೂಲಕ ಕಿರಿಯ ಸಂಪಾದಕ ಸ್ಪರ್ಧೆ ಮೂಲಕ ವಿದ್ಯಾರ್ಥಿಗಳನ್ನು ಪಠ್ಯೇತರ ಚಟುವಟಿಕೆಗೆ ಒರೆ ಹಚ್ಚಿತ್ತು. ರಾಜ್ಯಾದ್ಯಂತ ಹಲವು ಶಾಲೆಗಳಲ್ಲಿ ನಡೆದ ಈ ಪ್ರಯತ್ನಕ್ಕೆ ಭಾರೀ ಭಾರಿ ಪ್ರತಿಕ್ರಿಯೆ ದೊರಕಿತ್ತು. ಮಾಧ್ಯಮ ಕ್ಷೇತ್ರದಲ್ಲೇ ವಿನೂತನ ಪ್ರಯತ್ನ ಮಾಡಿರುವ ಸುವರ್ಣನ್ಯೂಸ್ ಹಾಗೂ ಕನ್ನಡಪ್ರಭ ತಂಡದ ಕಿರಿಯ ಸಂಪಾದಕ ಸ್ಪರ್ಧೆ ಮೆಚ್ಚುಗೆಗೆ ಪಾತ್ರವಾಗಿದೆ.
