ಸುವರ್ಣನ್ಯೂಸ್ ವರದಿಯಿಂದ ಎಚ್ಚೆತ್ತ ಕಿರಣ್ ಮಜುಮ್ದಾರ್ ತಾವು ಮಾಡಿದ ಆ ಎರಡು ಟ್ವೀಟ್'ಗಳನ್ನು ಡಿಲೀಟ್ ಮಾಡಿದ್ದಾರೆ.

ಬೆಂಗಳೂರು(ಸೆ. 09): ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಮ್ದಾರ್ ಶಾ ಬೆಂಗಳೂರನ್ನು ಬಂದ್'ನ ನಗರವೆಂದು ಬಣ್ಣಿಸಿ ಟ್ವೀಟ್ ಮಾಡಿ ವಿವಾದಕ್ಕೆ ಸಿಲುಕಿದ್ದಾರೆ. ಬೆಂಗಳೂರಿಗೆ 'ಬಂದಳೂರು' ಎಂದು ಕರೆಯಬೇಕೆಂದು ಕಿರಣ್ ಮಜುಮ್ದಾರ್ ಅವರು ಟ್ವೀಟ್ ಮಾಡಿದ್ದರು. ಬಂದ್'ಗಳಿಂದಾಗಿ ಪ್ರೊಡಕ್ಟಿವಿಟಿಗೆ ತೊಂದರೆಯಾಗುತ್ತಿದೆ ಎಂದು ವಿಷಾದಿಸಿದ್ದರು. ಕುಡಿಯುವ ನೀರಿನ ತತ್ವಾರದ ಅರಿವು ಇಲ್ಲದೆಯೇ ಕಿರಣ್ ಮಜುಮ್ದಾರ್ ಅವರು ಇಂಥ ಹೇಳಿಕೆ ನೀಡಿದೆ ಎಂದು ಸುವರ್ಣನ್ಯೂಸ್ ವರದಿ ಮಾಡಿತ್ತು. ಇದರಿಂದ ಎಚ್ಚೆತ್ತ ಕಿರಣ್ ಮಜುಮ್ದಾರ್ ತಾವು ಮಾಡಿದ ಆ ಎರಡು ಟ್ವೀಟ್'ಗಳನ್ನು ಡಿಲೀಟ್ ಮಾಡಿದ್ದಾರೆ. ಜೊತೆಗೆ, ತನ್ನ ಮಾತುಗಳನ್ನು ತಿರುಚಿಸಿ ವರದಿ ಪ್ರಸಾರ ಮಾಡಲಾಗಿದೆ. ಯಾವುದೇ ಹಿಂಸಾಚಾರವಿಲ್ಲದೇ ಬಿಕ್ಕಟ್ಟನ್ನು ಬಗೆಹರಿಸಬೇಕೆಂದು ನಾನು ಹೇಳಿದ್ದಷ್ಟೇ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಕರ್ನಾಟಕದ ರೈತರು ಮತ್ತು ಜನತೆಯ ಆಶಯಗಳಿಗೆ ಬೆಂಬಲ ಸೂಚಿಸಿ ತಾವು ಬಂದ್ ಆಚರಿಸುತ್ತಿರುವುದಾಗಿ ತಮ್ಮ ಅಭಿಪ್ರಾಯವನ್ನು ಬದಲಿಸಿದ್ದಾರೆ.