ಬೆಂಗಳೂರಿನ ಕಿಮ್ಸ್ ಪತ್ನಿಯೋರ್ವರು ಅಪಾರ್ಟ್‌ಮೆಂಟ್ 5ನೇ ಮಹಡಿಯಿಂದ ಬಿದ್ದು  ಅನುಮಾನಾಸ್ಪದ ವಾಗಿ ಸಾವನ್ನಪ್ಪಿರುವ ಘಟನೆ ಭಾನು ವಾರ ರಾತ್ರಿ ಉತ್ತರಹಳ್ಳಿ ಯಲ್ಲಿ ನಡೆದಿದೆ. 

ಬೆಂಗಳೂರು: ಅಪಾರ್ಟ್‌ಮೆಂಟ್ 5ನೇ ಮಹಡಿಯಿಂದ ಬಿದ್ದು ವೈದ್ಯರ ಪತ್ನಿಯೊಬ್ಬರು ಅನುಮಾನಾಸ್ಪದ ವಾಗಿ ಸಾವನ್ನಪ್ಪಿರುವ ಘಟನೆ ಭಾನು ವಾರ ರಾತ್ರಿ ಉತ್ತರಹಳ್ಳಿ ಯಲ್ಲಿ ನಡೆದಿದೆ. ಉತ್ತರಹಳ್ಳಿ ನಿವಾಸಿ ಸೋನಾಲ್ ಅಗರ ವಾಲ್ (25) ಮೃತರು. ಸೋನಾಲ್ ಪತಿ ಅವಿ ನಾಶ್ ಮತ್ತು 3 ವರ್ಷದ ಮಗು ವಿನ ಜತೆ ಮಂತ್ರಿ ಅಲ್ಪೈನ್ ಅಪಾರ್ಟ್‌ಮೆಂಟ್‌ನ 5ನೇ ಮಹಡಿಯಲ್ಲಿ 505ರ ಫ್ಲ್ಯಾಟ್‌ನಲ್ಲಿ ವಾಸವಿದ್ದರು. ಭಾನುವಾರ ರಾತ್ರಿ ಸೋನಾಲ್ 501 ನ ಫ್ಲ್ಯಾಟ್‌ಗೆ ತೆರಳಿದ್ದರು. ಈ ವೇಳೆ 501 ಫ್ಲ್ಯಾಟ್‌ನಲ್ಲಿ ಕುಟುಂಬ ಹೊರಗೆ ಹೋಗಿತ್ತು. ಸಂಜೆ 7.30ರ ಸುಮಾರಿಗೆ 501 ಫ್ಲ್ಯಾಟ್‌ನಲ್ಲಿ ವಾಸವಿದ್ದ ಕುಟುಂಬ ಮನೆಗೆ ಬಂದಿದೆ. 

Add Asianetnews Kannada as a Preferred SourcegooglePreferred

ಫ್ಲ್ಯಾಟ್ ಮಾಲೀಕರನ್ನು ನೋಡಿದ ಕೂಡಲೇ ಸೋನಾಲ್ ಅಗರವಾಲ್ ಐದನೇ ಮಹಡಿಯಿಂದ ಕೆಳಗೆ ಜಿಗಿದಿದ್ದಾರೆ. ಬಳಿಕ ತೀವ್ರ ರಕ್ತಸ್ರಾವವಾಗಿ ಸೋನಾಲ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು. 

ಸ್ಥಳಕ್ಕೆ ಧಾವಿಸಿದ ರಾಜರಾಜೇಶ್ವರಿ ನಗರ ಠಾಣೆ ಪೊಲೀಸರು ಪರಿಶೀಲನೆ ನಡೆಸಿದಾಗ, ಸೋನಾಲಿ ಅವರ ಒಳ ಉಡುಪಿನಲ್ಲಿ ಮೊಬೈಲ್ ಮತ್ತು ಚಿನ್ನಾಭರಣ ಪತ್ತೆಯಾಗಿದೆ. ಸೋನಾಲ್ ಬಳಿ ಕೀಯೊಂದು ಪತ್ತೆಯಾಗಿದೆ. ಏಕೆ ಬೇರೊಬ್ಬರ ಫ್ಲ್ಯಾಟ್‌ಗೆ ತೆರಳಿದ್ದರೂ, ಫ್ಲ್ಯಾಟ್‌ನಲ್ಲಿ ಬೇರೆ ಯಾರಾದರೂ ಇದ್ದಾರಾ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ಸಂಬಂಧ ರಾಜರಾಜೇಶ್ವರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.