Asianet Suvarna News Asianet Suvarna News

ಗನ್ ಪಾಯಿಂಟ್`ನಲ್ಲಿ ಕಿಮ್ ಕರ್ದಾಶಿಯನ್`ಳನ್ನ ದೋಚಿದ ಖದೀಮರು

kim kardashian robbed by 5 masked men fled with jewels worth millions

ಪ್ಯಾರಿಸ್(ಅ.03): ಅಮೆರಿಕದ ರಿಯಾಲಿಟಿ ಟೆಲಿವಿಜನ್ ಸ್ಟಾರ್, ತಮ್ಮ ಮೈಮಾಟದ ಮೂಲಕವೇ ಜಗತ್ತಿನ ರಸಿಕರೆದೆಗೆ ಕಿಚ್ಚು ಹಚ್ಚುತ್ತಿದ್ದ ಕಿಮ್ ಕರ್ದಾಶಿಯನ್ ತಲೆಗೆ ಗನ್ನಿಟ್ಟು ಹಲವು ಮಿಲಿಯನ್`ನಷ್ಟು ಒಡವೆಗಳನ್ನ ದೋಚಿರುವ ಬಗ್ಗೆ ವರದಿಯಾಗಿದೆ.

ಕಿಮ್, ಪ್ಯಾರಿಸ್`ನ ಖಾಸಗಿ ಅಪಾರ್ಟ್`ಮೆಂಟಿನಲ್ಲಿ ಇದ್ದ ಸಂದರ್ಭ ಪೊಲೀಸ್ ವೇಷ ಧರಿಸಿ ಬಂದಿದ್ದ ಐವರು ದುಷ್ಕರ್ಮಿಗಳು ಗನ್ ಪಾಯಿಂಟ್`ನಲ್ಲಿ ದರೋಡೆ ಮಾಡಿದ್ದಾರೆ. ಕಿಮ್ ಗಂಡ ಕನ್ಯೆ ವೆಸ್ಟ್ ನ್ಯೂಯಾರ್ಕ್`ನಲ್ಲಿ ಸಂಗೀತ ಕಾರ್ಯಕ್ರಮ ನಡೆಸುತ್ತಿದ್ದ ಸಂದರ್ಭವೇ ಈ ಘಟನೆ ನಡೆದಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಟೇಜ್ ಮೇಲಿಂದ ಕೆಳಗಿಳಿದು ಬಂದಿದ್ದಾರೆ.