ನಾಲ್ಕು ದಿನಗಳ ಹಿಂದೆ 22 ವರ್ಷದ ಯೋಧ ಲೆಫ್ಟಿನೆಂಟ್ ಉಮರ್ ಫಯಾಜ್ ಅವರನ್ನು ಕಾಶ್ಮೀರದ ಶೋಪಿಯನ್ ಜಿಲ್ಲೆಯಲ್ಲಿ ಹತ್ಯೆಗೈಯಲಾಗಿತ್ತು.

ಶ್ರೀನಗರ(ಮೇ 13): ಭಾರತೀಯ ಯುವ ಸೇನಾಧಿಕಾರಿ ಉಮರ್ ಫಯಾಜ್ ಹತ್ಯೆ ಪ್ರಕರಣದಲ್ಲಿ ಆರು ಉಗ್ರರನ್ನು ಬಂಧಿಸಲಾಗಿದೆ. ಬಂಧಿತ ಉಗ್ರರು ಲಷ್ಕರೆ ತೈಬಾ ಮತ್ತು ಹಿಜ್ಬುಲ್ ಮುಜಾಹಿದೀನ್ ಸಂಘಟನೆಗಳಿಗೆ ಸೇರಿದವರೆನ್ನಲಾಗಿದೆ.

ನಾಲ್ಕು ದಿನಗಳ ಹಿಂದೆ 22 ವರ್ಷದ ಯೋಧ ಲೆಫ್ಟಿನೆಂಟ್ ಉಮರ್ ಫಯಾಜ್ ಅವರನ್ನು ಕಾಶ್ಮೀರದ ಶೋಪಿಯನ್ ಜಿಲ್ಲೆಯಲ್ಲಿ ಹತ್ಯೆಗೈಯಲಾಗಿತ್ತು. ರಜೆಯ ಮೇಲಿದ್ದ ಫಯಾಜ್ ಅವರು ತಮ್ಮ ಸಂಬಂಧಿಯೊಬ್ಬರ ಮದುವೆಗೆಂದು ಶೋಪಿಯನ್'ನ ಬಾತ್'ಪುರ ಗ್ರಾಮಕ್ಕೆ ಹೋಗಿದ್ದರು. ಆಗ ಮನೆಗೆ ನುಗ್ಗಿದ ಉಗ್ರರ ತಂಡವೊಂದು ಉಮರ್ ಫಯಾಜ್'ರನ್ನು ಕಿಡ್ನಾಪ್ ಮಾಡಿದೆ. ಬುಧವಾರ ಬೆಳಗ್ಗೆ ಅವರ ಮೃತ ದೇಹವು ಶೋಪಿಯನ್ ಜಿಲ್ಲೆಯ ಹರ್ಮೆನ್ ಎಂಬಲ್ಲಿ ಪತ್ತೆಯಾಗಿತ್ತು.

ಶೋಚನೀಯ ವಿಚಾರವೆಂದರೆ, ಉಮರ್ ಫಯಾಜ್ ಅಂತ್ಯಕ್ರಿಯೆ ಸಂದರ್ಭದಲ್ಲಿ ಮೆರವಣಿಗೆ ಮೇಲೆ ಕೆಲ ದುಷ್ಕರ್ಮಿಗಳು ಕಲ್ಲುತೂರಾಟ ನಡೆಸಿದ್ದರು. ಈ ಘಟನೆ ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಯಿತು.