ಕಿದ್ವಾಯಿ ಸ್ಮಾರಕ ಗಂಥಿ ಕೇಂದ್ರವನ್ನು ಅತ್ಯಾಧುನಿಕ ಯಂತ್ರೋಪಕರಣ ಮತ್ತು ಅಗತ್ಯ ಪರಿಕರಗಳೊಂದಿಗೆ 250 ಕೋಟಿ ರೂ ವೆಚ್ಚದಲ್ಲಿ ಉನ್ನತೀಕರಿಸಲಾಗಿದ್ದು, ಇದನ್ನು ಮಾರ್ಚ್ ತಿಂಗಳಿನಲ್ಲಿ ಸಾರ್ವಜನಿಕ ಸೇವೆಗೆ ಸಮರ್ಪಿಸಲಾಗುವುದು. ಉದ್ಘಾಟನೆಗೆ ರಾಷ್ಟ್ರಪತಿಯವರ ದಿನಾಂಕ ಕೇಳಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.

ಬೆಂಗಳೂರು(ಡಿ.27): ಕಿದ್ವಾಯಿ ಸ್ಮಾರಕ ಗಂಥಿ ಕೇಂದ್ರವನ್ನು ಅತ್ಯಾಧುನಿಕ ಯಂತ್ರೋಪಕರಣ ಮತ್ತು ಅಗತ್ಯ ಪರಿಕರಗಳೊಂದಿಗೆ 250 ಕೋಟಿ ರೂ ವೆಚ್ಚದಲ್ಲಿ ಉನ್ನತೀಕರಿಸಲಾಗಿದ್ದು, ಇದನ್ನು ಮಾರ್ಚ್ ತಿಂಗಳಿನಲ್ಲಿ ಸಾರ್ವಜನಿಕ ಸೇವೆಗೆ ಸಮರ್ಪಿಸಲಾಗುವುದು. ಉದ್ಘಾಟನೆಗೆ ರಾಷ್ಟ್ರಪತಿಯವರ ದಿನಾಂಕ ಕೇಳಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.

ಕಿದ್ವಾಯಿ ಆಸ್ಪತ್ರೆಯಲ್ಲಿ ಪ್ರಸ್ತುತ 250 ಹಾಸಿಗೆ ಇದ್ದು, ಸಿಪಾನಿ ಕಂಪನಿಯು 400 ಹಾಸಿಗೆಗಳ ವಾರ್ಡ್ ನಿರ್ಮಿಸಿಕೊಡು ವುದಾಗಿ ತಿಳಿಸಿದೆ. 200 ಹಾಸಿಗೆಗಳ ವಾರ್ಡ್ ಮೊದಲ ಹಂತದಲ್ಲಿ ನಿರ್ಮಿಸಲಾಗುತ್ತಿದೆ. ಅದೇ ರೀತಿ ಇನ್ಫೋಸಿಸ್ ವತಿಯಿಂದ ಕಲಬುರಗಿಯಲ್ಲಿ ಆರು ಕೋಟಿ ರು. ವೆಚ್ಚದಲ್ಲಿ ಧರ್ಮಶಾಲೆ ಆರಂಭವಾಗಲಿದೆ. ಬಿಇಎಲ್‌ನಿಂದ ಸಂಚಾರಿ ಘಟಕವೂ ಕಾರ್ಯಾರಂಭ ಮಾಡಲಿದೆ ಎಂದು ವಿವರಿಸಿದರು. ಕೆಸಿಡಿಎಫ್ ಫೌಂಡೇಶನ್‌ನಿಂದ ಕಿದ್ವಾಯಿ ಆಸ್ಪತ್ರೆಯಲ್ಲಿ ಕ್ಯಾನ್ಸರ್ ರೋಗಿಗಳಿಗೆ ರಿಯಾಯಿತಿ ದರದಲ್ಲಿ ಔಷಧಿ ನೀಡಲಾಗುತ್ತಿದೆ. ಕಳೆದ ಒಂದು ವರ್ಷದಲ್ಲಿ 18 ಕೋಟಿ ರೂ ಅಲ್ಲಿ ವಹಿವಾಟು ನಡೆದಿದ್ದು, ಎಂಆರ್‌ಪಿ ದರದಲ್ಲಿ ಮಾರಾಟ ಮಾಡಿದ್ದರೆ ಅದು 23 ಕೋಟಿ ರೂ ಆಗುತ್ತಿತ್ತು. ಇದರಿಂದ ಕ್ಯಾನ್ಸರ್ ರೋಗಿಗಳಿಗೆ ಉಪಯೋಗ ಆಗುತ್ತಿದೆ ಎಂದರು. 3 ಸೂಪರ್ ಸ್ಟೆಷಾಲಿಟಿ ಆಸ್ಪತ್ರೆ: ಐದು ಹೊಸ ಸೂಪರ್ ಸ್ಟೆಷಾಲಿಟಿ ಆಸ್ಪತ್ರೆಗಳನ್ನು ಆರಂಭಿಸುವುದಾಗಿ ಭರವಸೆ ನೀಡಲಾಗಿತ್ತು. ಈಗಾಗಲೇ ಕೇಂದ್ರ ಸರ್ಕಾರದ ನೆರವಿನೊಂದಿಗೆ ಬಳ್ಳಾರಿ ಮತ್ತು ಹುಬ್ಬಳ್ಳಿಯಲ್ಲಿ ನಿರ್ಮಿಸುತ್ತಿರುವ ಎರಡು ಸೂಪರ್ ಸ್ಟೆಷಾಲಿಟಿ ಆಸ್ಪತ್ರೆಗಳ ಕಾಮಗಾರಿ ಅಂತದಲ್ಲಿದೆ. ಜತೆಗೆ ಬೆಳಗಾವಿ, ಕಲಬುರಗಿ ಮತ್ತು ಮೈಸೂರು ಜಿಲ್ಲೆಗಳಲ್ಲಿ ಒಟ್ಟು ಸುಮಾರು ೪೦೦ ಕೋಟಿ ರು. ವೆಚ್ಚದಲ್ಲಿ ಇನ್ನೂ ಮೂರು ಸೂಪರ್ ಸ್ಟೆಷಾಲಿಟಿ ಆಸ್ಪತ್ರೆಗಳನ್ನು ನಿರ್ಮಾಣ ಮಾಡಲಾಗುವುದು. ಇನ್ನೊಂದು ತಿಂಗಳೊಳಗೆ ಇದಕ್ಕೆ ಶಂಕುಸ್ಥಾಪನೆ ನೆರವೇರಲಿದೆ ಎಂದು ಸಚಿವರು ಹೇಳಿದರು.