ಅಪಹರಣಕಾರರು  ರಾತ್ರಿಯಲ್ಲಾ ಕಾರಿನಲ್ಲಿ ಸುತ್ತಾಡಿಸಿ ತಾಲೂಕಿನ ತೆಂಡೇಕೆರೆ ಬಳಿ ಇಂದು ಸಂಜೆ ಮಹೇಶ್ ಚಂದ್ರ ಅವರನ್ನು ಬಿಟ್ಟು ಹೋಗಿದ್ದಾರೆ. 

ಕೆ.ಆರ್.ಪೇಟೆ[ಆ.03]: ಕೆ.ಆರ್.ಪೇಟೆ ತಹಸಿಲ್ದಾರ್ ಕಿಡ್ನಾಪ್ ಪ್ರಕರಣ ಸುಖಾಂತ್ಯ ಕಂಡಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಿನ್ನೆ ರಾತ್ರಿ ತಹಸೀಲ್ದಾರ್ ಮಹೇಶ್ ಚಂದ್ರ ವರನ್ನು ಅಪರಿಚಿತರು ಅಪಹರಿಸಿದ್ದರು. ಮಹೇಶ್ ಚಂದ್ರ ಅವರ ಕಿಡ್ನಾಪ್ ಪ್ರಕರಣ ತಾಲೂಕಿನಲ್ಲಿ ಆತಂಕ ಹುಟ್ಟಿಸಿತ್ತು. ಪೊಲೀಸರು ಕೂಡ ಹೆಚ್ಚು ತಲೆ ಕೆಡಿಸಿಕೊಂಡಿದ್ದರು. ಆದರೆ ಒಂದೇ ದಿನದಲ್ಲೇ ತಹಸೀಲ್ದಾರ್ ಬಿಡುಗಡೆಯಾಗಿದ್ದಾರೆ.

ಅಪಹರಣಕಾರರು ರಾತ್ರಿಯಲ್ಲಾ ಕಾರಿನಲ್ಲಿ ಸುತ್ತಾಡಿಸಿ ತಾಲೂಕಿನ ತೆಂಡೇಕೆರೆ ಬಳಿ ಇಂದು ಸಂಜೆ ಮಹೇಶ್ ಚಂದ್ರ ಅವರನ್ನು ಬಿಟ್ಟು ಹೋಗಿದ್ದಾರೆ. ಅಲ್ಲಿಂದ ಮಹೇಶ್ ಚಂದ್ರ ಅವರು ಲಾರಿ ಮೂಲಕ ಕೆ.ಆರ್.ಪೇಟೆ ತಲುಪಿದ್ದಾರೆ.