ಧಾನಸೌಧ ಎಲ್ ಹೆಚ್ ಗೇಟ್ ಬಳಿ, ಡಿಸೆಂಬರ್ 28ನೇ ತಾರೀಕು ಉದ್ಯಮಿ ಪದ್ಮನಾಭ್ ಅವರನ್ನು ಅಪಹರಣಕಾರರು ಕಿಡ್ನಾಪ್ ಮಾಡಿದ್ದರು. ಬಳಿಕ ಉಪ್ಪಾರಪೇಟೆಯ ಎಸ್ಎಂವಿ ಕಂಫರ್ಟ್ಸ್ ಲಾಡ್ಜ್ನ ರೂಂ ನಂಬರ್ 407ನಲ್ಲಿ ಬಂಧಿಸಿಟ್ಟಿದ್ದರು. ಪದ್ಮನಾಭ್ ನಡೆಸುತ್ತಿರುವ ಗಣಿಯನ್ನು ಜಿಪಿಎ ಮಾಡಿಕೊಡುವಂತೆ ಬೆದರಿಕೆ ಹಾಕಿ, ಖಾಲಿ ಇ-ಸ್ಟಾಂಪ್ ಪೇಪರ್ ಮೇಲೆ ಸಹಿಯನ್ನೂ ಹಾಕಿಸಿಕೊಂಡಿದ್ದರು.
ಬೆಂಗಳೂರು(ಜ.21): ವಿಧಾನಸೌಧದ ಶಾಸಕರ ಭವನದ ಗೇಟ್ ಬಳಿ, ಕಿಡ್ನಾಪ್ ನಡೆಯುತ್ತದೆ. ಇದನ್ನ ಊಹಿಸಿಕೊಳ್ಳೋಕೂ ಸಾಧ್ಯವಿಲ್ಲ. ಆದರೆ, ಅಂಥಾದ್ದೊಂದು ಘಟನೆ ನಡೆದುಹೋಗಿದೆ.
ವಿಧಾನಸೌಧ ಎಲ್ ಹೆಚ್ ಗೇಟ್ ಬಳಿ, ಡಿಸೆಂಬರ್ 28ನೇ ತಾರೀಕು ಉದ್ಯಮಿ ಪದ್ಮನಾಭ್ ಅವರನ್ನು ಅಪಹರಣಕಾರರು ಕಿಡ್ನಾಪ್ ಮಾಡಿದ್ದರು. ಬಳಿಕ ಉಪ್ಪಾರಪೇಟೆಯ ಎಸ್ಎಂವಿ ಕಂಫರ್ಟ್ಸ್ ಲಾಡ್ಜ್ನ ರೂಂ ನಂಬರ್ 407ನಲ್ಲಿ ಬಂಧಿಸಿಟ್ಟಿದ್ದರು. ಪದ್ಮನಾಭ್ ನಡೆಸುತ್ತಿರುವ ಗಣಿಯನ್ನು ಜಿಪಿಎ ಮಾಡಿಕೊಡುವಂತೆ ಬೆದರಿಕೆ ಹಾಕಿ, ಖಾಲಿ ಇ-ಸ್ಟಾಂಪ್ ಪೇಪರ್ ಮೇಲೆ ಸಹಿಯನ್ನೂ ಹಾಕಿಸಿಕೊಂಡಿದ್ದರು.
ಸುಧಾಕರ್ ಮತ್ತು ಆಂದ್ರ ಮೂಲದ ಸೂರ್ಯನಾರಾಯಣ ಎಂಬುವರಿಂದ ಕಿಡ್ನಾಪ್ ಆಗಿದ್ದ ಉದ್ಯಮಿ ಪದ್ಮನಾಭ್, ಹೇಗೋ ಅಪಹರಣಕಾರರಿಂದ ತಪ್ಪಿಸಿಕೊಂಡು ಬಂದು ಜನವರಿ 16ರಂದು ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ಧಾರೆ. ಪ್ರಕರಣವನ್ನ ಬನಶಂಕರಿ ಪೊಲೀಸರು ಉಪ್ಪಾರಪೇಟೆ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಮೂವರ ಮೇಲೆ ಪ್ರಕರಣ ದಾಖಲಿಸಿ ತನಿಖೆಯನ್ನೂ ಕೈಗೆತ್ತಿಕೊಂಡಿದ್ದಾರೆ. ಸದ್ಯಕ್ಕೆ ದೂರು ವಿಧಾನಸೌಧ ಠಾಣೆಗೆ ದೂರು ವರ್ಗಾವಣೆಯಾಗಿದೆ.
