ಪೊಲೀಸ್ ಡ್ರೆಸ್ ಹಾಕಿಕೊಂಡು ಬಂದು ಕಿಡ್ನಾಪ್ ಮಾಡಿರುವ ನಾಟಕೀಯ ಪ್ರಹಸನ  ಪುತ್ತೂರು ತಾಲೂಕಿನ ಅರಿಯಡ್ಕ ಗ್ರಾಮದಲ್ಲಿ ನಡೆದಿದೆ. 

ಮಂಗಳೂರು (ಮಾ. 28): ಪೊಲೀಸ್ ಡ್ರೆಸ್ ಹಾಕಿಕೊಂಡು ಬಂದು ಕಿಡ್ನಾಪ್ ಮಾಡಿರುವ ನಾಟಕೀಯ ಪ್ರಹಸನ ಪುತ್ತೂರು ತಾಲೂಕಿನ ಅರಿಯಡ್ಕ ಗ್ರಾಮದಲ್ಲಿ ನಡೆದಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರ ಹೆಸರಲ್ಲಿ ಕುತ್ಯಾಡಿ ನಿವಾಸಿ ಶ್ರೀಧರ ಎಂಬುವವರನ್ನು ಅಪಹರಣ ಮಾಡಲಾಗಿದೆ. ಮಾ.26 ರ ರಾತ್ರಿ ಬಂದು ಪೊಲೀಸ್ ಠಾಣೆಗೆ ಬಾ ಅಂತಾ ಕರೆದುಕೊಂಡು ಹೋಗಿದ್ದಾರೆ ಅಪರಿಚಿತರು. ನಂತರ ನಿನ್ನೆ ಪೊಲೀಸ್ ಠಾಣೆಗೆ ಹೋಗಿ ವಿಚಾರಿಸಿದಾಗ ನಿಜಾಂಶ ಹೊರ ಬಿದ್ದಿದೆ. ಈ ಬಗ್ಗೆ ಶ್ರೀಧರ್ ಪತ್ನಿ ಸೌಮ್ಯ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.