ಚಿತ್ರರಂಗದಲ್ಲಿ ಯಾರೇ ಸಂಕಷ್ಟಕ್ಕೆ ಸಿಲುಕಿದರೂ ನೆರವು ಸಿಗುತ್ತದೆ. ಡಾ. ರಾಜ್ ಕುಟುಂಬ, ಸುದೀಪ್, ಅಂಬರೀಶ್, ರಾಕ್'ಲೈನ್ ವೆಂಕಟೇಶ್ ಮೊದಲಾದವರೆಲ್ಲರೂ ಯಾವ ಪ್ರಚಾರದ ಹಂಗಿಲ್ಲದೆ ಕಲಾವಿದರಿಗೆ ಸಹಾಯ ಮಾಡುತ್ತಾರೆ ಎಂದು ವೀರೇಶ್ ಸುವರ್ಣನ್ಯೂಸ್'ಗೆ ತಿಳಿಸಿದರು.

ಬೆಂಗಳೂರು(ಆ. 16): ಹಿರಿಯ ನಟ ಸದಾಶಿವ ಬ್ರಹ್ಮಾವರ್ ಒಂದ್ಹೊತ್ತಿನ ಊಟಕ್ಕೂ ಗತಿಯಿಲ್ಲದೆ ಬೀದಿಗೆ ಬಂದಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಸಾರವಾದ ಬೆನ್ನಲ್ಲೇ ಚಿತ್ರರಂಗದ ಅನೇಕ ಹಿರಿಯರು ಈ ಮೇರು ಕಲಾವಿದನ ನೆರವಿಗೆ ಧಾವಿಸಲು ಮುಂದಾಗಿದ್ದಾರೆ. ಬ್ರಹ್ಮಾವರ್ ಅವರಿಗೆ ಜೀವನ ನಿರ್ವಹಣೆಗೆ ಏನಾದರೂ ವ್ಯವಸ್ಥೆ ಮಾಡುವುದು ಕಿಚ್ಚ ಸುದೀಪ್ ಅಪೇಕ್ಷೆಯಾಗಿದೆ. ಬ್ರಹ್ಮಾವರ್'ಗೆ ಹಣ ಕೊಡುವ ಬದಲು ಅವರಿಗೆ ವರಮಾನ ಕೊಡುವ ವ್ಯವಸ್ಥೆ ಮಾಡುವುದು ಉತ್ತಮ ಎಂಬುದು ಸುದೀಪ್ ಅಭಿಪ್ರಾಯವಾಗಿದೆ. ಈ ಬಗ್ಗೆ ಸುವರ್ಣನ್ಯೂಸ್ ಜೊತೆ ಮಾತನಾಡಿದ ಚಿತ್ರಲೋಕ ಡಾಟ್ ಕಾಮ್ ಮುಖ್ಯಸ್ಥ ಕೆಎಂ ವೀರೇಶ್, ತಮ್ಮ ವೆಬ್'ಸೈಟ್'ನಲ್ಲಿ ನಿನ್ನೆ ಬ್ರಹ್ಮಾವರ್ ಬಗ್ಗೆ ಮೊದಲು ವರದಿ ಪ್ರಸಾರವಾದ ಬೆನ್ನಲ್ಲೇ ಕಿಚ್ಚ ಸುದೀಪ್ ದೂರವಾಣಿ ಕರೆ ಮಾಡಿ ಮಾತನಾಡಿದ ವಿವರವನ್ನು ತಿಳಿಸಿದರು.

ಚಿತ್ರರಂಗದಲ್ಲಿ ಯಾರೇ ಸಂಕಷ್ಟಕ್ಕೆ ಸಿಲುಕಿದರೂ ನೆರವು ಸಿಗುತ್ತದೆ. ಡಾ. ರಾಜ್ ಕುಟುಂಬ, ಸುದೀಪ್, ಅಂಬರೀಶ್, ರಾಕ್'ಲೈನ್ ವೆಂಕಟೇಶ್ ಮೊದಲಾದವರೆಲ್ಲರೂ ಯಾವ ಪ್ರಚಾರದ ಹಂಗಿಲ್ಲದೆ ಕಲಾವಿದರಿಗೆ ಸಹಾಯ ಮಾಡುತ್ತಾರೆ ಎಂದು ವೀರೇಶ್ ಸುವರ್ಣನ್ಯೂಸ್'ಗೆ ತಿಳಿಸಿದರು.

ಇಂದು ಬೆಳಗ್ಗೆ ಸುವರ್ಣನ್ಯೂಸ್'ನಲ್ಲಿ ಸದಾಶಿವ್ ಬ್ರಹ್ಮಾವರ್ ಕುರಿತು ವರದಿ ಪ್ರಸಾರವಾದಾಗ ಸಾಕಷ್ಟು ಅನುಕಂಪಗಳು ವ್ಯಕ್ತವಾಗಿವೆ. ಶಿವರಾಜ್'ಕುಮಾರ್ ಕೂಡ ಪ್ರತಿಕ್ರಿಯಿಸಿ, ತಮಗೆ ಕೈಲಾದ ಸಹಾಯ ಮಾಡುವ ಭರವಸೆ ನೀಡಿದ್ದಾರೆ.