ಜಮ್ಮು-ಕಾಶ್ಮೀರದಲ್ಲಿ 'ಹೆಬ್ಬುಲಿ' ಚಿತ್ರದ ಶೂಟಿಂಗ್'ನಲ್ಲಿ ನಿರತರಾಗಿರುವ ಕಿಚ್ಚ ಸುದೀಪ್ ತಮ್ಮ ಚಿತ್ರತಂಡದೊಂದಿಗೆ ಅಲ್ಲಿಂದಲೇ ಕಾವೇರಿ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ಹೋರಾಟದಲ್ಲಿ ಸ್ವತಃ ಭಾಗಿಯಾಗಲು ಸಾಧ್ಯವಾಗದ್ದಕ್ಕೆ ವಿಷಾದಿಸಿದ್ದಾರೆ. ಅವರು ಹೇಳಿದ ಮಾತುಗಳು ಇಲ್ಲಿವೆ...

"ಸಮಸ್ತ ಕನ್ನಡ ಜನತೆಗೆ ಕರ್ನಾಟಕದ ಜನತೆಗೆ ಹೆಬ್ಬುಲಿ ಚಿತ್ರತಂಡದ ಪರವಾಗಿ ನಮಸ್ಕಾರ.

ಈಗ ನಡೆಯುತ್ತಿರುವ ಕಾವೇರಿ ಪ್ರತಿಭಟನೆಗೆ ನನ್ನ ಸಂಪೂರ್ಣ ಬೆಂಬಲವಿದೆ. ನಾವು ಶ್ರೀನಗರದಿಂದ ಬಹಳ ದೂರವಿರುವ ಕಾರಣದಿಂದ ಇಲ್ಲಿ ನೆಟ್'ವರ್ಕ್ ಸಿಗ್ತಿಲ್ಲ. ಹೀಗಾಗಿ ನನಗೆ ಈ ವಿಚಾರ ತಿಳಿದಿರಲಿಲ್ಲ. ತಿಳಿಯುತ್ತಿದ್ದಂತೆಯೇ ನಾನ ನೆಟ್ವರ್ಕ್ ಇರುವಲ್ಲಿ ಬಂದು ಈ ವಿಡಿಯೋವನ್ನು ರೆಕಾರ್ಡ್ ಮಾಡಿ ಕಳಿಸುತ್ತಿದ್ದೇನೆ. ಈಗ ಬೆಂಗಳೂರಿಗೆ ಹೊಟಡಲು ಸಾಧ್ಯವಾಗುತ್ತಿಲ್ಲ. ಇದಕ್ಕಾಗಿ ಕ್ಷಮೆ ಯಾಚಿಸುತ್ತೇನೆ. ಆದರೆ ನಮ್ಮ ಜನ, ನಮ್ಮ ನೆಲಕ್ಕೆ, ನಮ್ಮ ನೀರಿಗೆ ಸಂಪೂರ್ಣ ಸಹಕಾರ ಯಾವಾಗಲೂ ಇದ್ದೇ ಇರುತ್ತದೆ ಎನ್ನಲು ಇಷ್ಟ ಪಡುತ್ತೇನೆ. ನಾವು ಅಲ್ಲಿರದಿದ್ದರೂ ನನ್ನ ಸಹಕಾರ ಹಾಗೂ ಬೆಂಬಲ ನಿಮ್ಮೊಂದಿಗೆ ಇದ್ದೇ ಇದೆ. ನಮ್ಮದು ಯಾವತ್ತಿದ್ದರೂ ನಮ್ಮದೇ, ಆ ನಮ್ಮದು ಎನ್ನುವುದಕ್ಕೆ ನಾವು ಹೋರಾಡೋಣ. ಎಲ್ಲೋ ಒಂದು ಕಡೆ ನ್ಯಾಯ ನಮಗೆ ಒದಗುತ್ತದೆ ಅದಕ್ಕೆ ಅಂತ ಒಂದು ದಾರಿ ಇದ್ದೇ ಇರುತ್ತದೆ. ಅದನ್ನು ನಾವು ಹುಡುಕೋಣ. ಮತ್ತೊಮ್ಮ ನಾಣು ಅಲಲ್ಇ ಇರದಿರುವುದಕ್ಕೆ ಕ್ಷಮೆ ಯಾಚಿಸುತ್ತೇನೆ.

ನಾನು ನಿಮ್ಮ ಕಿಚ್ಚ"