ತಿರುವನಂತಪುರ: ಕಳೆದ ಕೆಲ ದಿನಗಳಿಂದ ದಕ್ಷಿಣ ಭಾರತದಾದ್ಯಂತ ಜನಸಾಮಾನ್ಯರನ್ನು ಕಂಗೆಡಿಸಿರುವ ಚಳಿ, ಇದೀಗ ಕೇರಳದಲ್ಲಿ ಇನ್ನಷ್ಟು ಗಂಭೀರ ಸ್ವರೂಪ ಪಡೆದುಕೊಂಡಿದೆ. 

ಭಾನುವಾರ ರಾತ್ರಿ ಕೇರಳದ ಪ್ರಸಿದ್ಧ ತಾಣಗಳಲ್ಲಿ ಒಂದಾದ ಮುನ್ನಾರ್‌ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೈನಸ್‌ 3 ಡಿ.ಸೆ.ನಷ್ಟುತಾಪಮಾನ ದಾಖಲಾಗಿದೆ. 

ಪ್ರವಾಸಿಗರ ಸ್ವರ್ಗ ಎನ್ನಿಸಿಕೊಂಡಿರುವ ಮುನ್ನಾರ್‌ ಮತ್ತಿತರ ಪ್ರದೇಶಗಳಲ್ಲಿ ಉಷ್ಣಾಂಶ ಸದಾ ಕಡಿಮೆ ಇರುತ್ತದೆಯಾದರೂ, ಭಾನುವಾರ ತಾಪಮಾನ್ಯ ಶೂನ್ಯಕ್ಕಿಂತ ಕೆಳಗೆ ಇಳಿದ ಪರಿಣಾಮ, ಪ್ರವಾಸಿಗರು ಸ್ವಲ್ಪ ಮಟ್ಟಿಗೆ ಭಾರೀ ಚಳಿಯ ಬಿಸಿ ಅನುಭವಿಸುವಂತಾಯಿತು.

ಆದರೂ ಮುನ್ನಾರ್‌ ಸುತ್ತಮುತ್ತಲ ಪ್ರದೇಶಗಳಲ್ಲಿ ಇದೀಗ ಹಿಮಾಚ್ಛಾದಿತ ವಾತಾವರಣ ಇದ್ದು, ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ಭಾರೀ ಪ್ರವಾಹದಿಂದಾಗಿ ಪ್ರವಾಸಿಗರನ್ನು ಕಳೆದುಕೊಂಡಿದ್ದ ಕೇರಳಕ್ಕೆ, ಚಳಿ ಇದೀಗ ಪ್ರವಾಸಿಗರನ್ನು ಮತ್ತೆ ತಂದುಕೊಟ್ಟಿದೆ.