ಸಂಸದನ ಪತ್ನಿಯಿಂದ ಕಿರುಕುಳ ಆರೋಪ; ಶಾಸಕನ ಪುತ್ರನಿಂದ ದೂರು!

First Published 18, Mar 2018, 4:49 PM IST
Kerala MLA Son Lodges Complaint Against MPs Wife
Highlights

ಕೇರಳದ ಪ್ರಭಾವಿ ಶಾಸಕರೊಬ್ಬರ ಪುತ್ರ ತನಗೆ ಕಿರುಕುಳ ನೀಡಿರುವುದಾಗಿ ಆರೋಪಿಸಿರುವ ಬೆನ್ನಲ್ಲೇ, ಶಾಸಕ ಪುತ್ರ  ಶೋನ್ ಜಾರ್ಜ್ ಸಂಸದನ ಪತ್ನಿಯ ವಿರುದ್ಧ ದೂರು ದಾಖಲಿಸಿರುವ ಘಟನೆ ನಡೆದಿದೆ.

ಬೆಂಗಳೂರು: ಕೇರಳದ ಪ್ರಭಾವಿ ಶಾಸಕರೊಬ್ಬರ ಪುತ್ರ ತನಗೆ ಕಿರುಕುಳ ನೀಡಿರುವುದಾಗಿ ಆರೋಪಿಸಿರುವ ಬೆನ್ನಲ್ಲೇ, ಶಾಸಕ ಪುತ್ರ  ಶೋನ್ ಜಾರ್ಜ್ ಸಂಸದನ ಪತ್ನಿಯ ವಿರುದ್ಧ ದೂರು ದಾಖಲಿಸಿರುವ ಘಟನೆ ನಡೆದಿದೆ.

ಇತ್ತೀಚೆಗೆ ಬಿಡುಗಡೆಯಾದ ಆತ್ಮಚರಿತ್ರೆಯಲ್ಲಿ ಕೇರಳದ ಸಂಸದರ ಪತ್ನಿಯು ಶಾಸಕನ ಪುತ್ರ ತನಗೆ ಕಿರುಕುಳ ನೀಡಿರುವುದಾಗಿ ಬರೆದುಕೊಂಡಿದ್ದಾರೆ. ಆದರೆ ಅವರು ಆ ವ್ಯಕ್ತಿಯ ಹೆಸರನ್ನು ಬಹಿರಂಗಪಡಿಸಿಲ್ಲ.

ಆಕೆ ಹೆಸರನ್ನು ಬರೆದುಕೊಂಡಿಲ್ಲವಾದರೂ, ನನ್ನ ವಿರುದ್ಧ ಬರೆದಿರುವುದು ಆಕೆಯ ಬರವಣಿಗೆಯಲ್ಲಿ ಸ್ಪಷ್ವವಾಗಿದೆ. ನಾನು ಯಾವುದೇ ತಪ್ಪೆಸಗಿಲ್ಲ, ನನ್ನಿಂದ ತಪ್ಪಾಗಿದ್ದರೆ ಆಕೆ ದೂರು ದಾಖಲಿಸಲಿ. ಸತ್ಯಯೇನೆಂಬುವುದು ಹೊರಬರಲೇ ಬೇಕೆಂದು ಶೋನ್ ಜಾರ್ಜ್ ಈ ಸಂದರ್ಭದಲ್ಲಿ ಹೇಳಿದ್ದಾರೆ.

loader