ಅದು ಸಾಧ್ಯವೇ ಇಲ್ಲ ಎನ್ನುವರು ನೀವಾದರೆ ಕೇರಳಕ್ಕೆ ಬರಬೇಕು. ಅಲ್ಲೊಬ್ಬ ವ್ಯಕ್ತಿ ಬರಿಗೈಯಲ್ಲೇ ತೆಂಗಿನಕಾಯಿ ಒಡೆಯುತ್ತಾನೆ. ಅಷ್ಟೇ ಅಲ್ಲ, ಒಂದೇ ನಿಮಿಷದಲ್ಲಿ ಬರೋಬ್ಬರಿ 124 ತೆಂಗಿನಕಾಯಿಗಳನ್ನು ಒಡೆದು ವಿಶ್ವ ದಾಖಲೆಯನ್ನೇ ನಿರ್ಮಾಣ ಮಾಡಿದ್ದಾನೆ.
ನವದೆಹಲಿ(ಫೆ.24): ತೆಂಗಿನಕಾಯಿಯನ್ನು ಒಡೆಯುವ ಮುನ್ನ ಗಟ್ಟಿಮುಟ್ಟಾದ ಜಾಗ ಹುಡುಕುತ್ತೇವೆ. ಅದರ ಬದಲು ನೆಲದ ಮೇಲೆ ತೆಂಗಿನಕಾಯಿ ಇಟ್ಟು ಅದನ್ನು ಕೈಯಿಂದಲೇ ಒಡೆದರೆ?!
ಅದು ಸಾಧ್ಯವೇ ಇಲ್ಲ ಎನ್ನುವರು ನೀವಾದರೆ ಕೇರಳಕ್ಕೆ ಬರಬೇಕು. ಅಲ್ಲೊಬ್ಬ ವ್ಯಕ್ತಿ ಬರಿಗೈಯಲ್ಲೇ ತೆಂಗಿನಕಾಯಿ ಒಡೆಯುತ್ತಾನೆ. ಅಷ್ಟೇ ಅಲ್ಲ, ಒಂದೇ ನಿಮಿಷದಲ್ಲಿ ಬರೋಬ್ಬರಿ 124 ತೆಂಗಿನಕಾಯಿಗಳನ್ನು ಒಡೆದು ವಿಶ್ವ ದಾಖಲೆಯನ್ನೇ ನಿರ್ಮಾಣ ಮಾಡಿದ್ದಾನೆ.
ಕೇರಳ ರಸ್ತೆ ಸಾರಿಗೆ ನಿಗಮದ ಉದ್ಯೋಗಿಯಾಗಿರುವ ಕೇರಳದ ಪೂಂಜಾರ್‌ನ ಪಿ. ಡೊಮಾನಿಕ್ ಈ ಸಾಧನೆ ಮಾಡಿದಾತ. ತ್ರಿಶ್ಶೂರಿನ ಶೋಭಾ ಸಿಟಿ ಮಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಈತ 124 ತೆಂಗಿನಕಾಯಿಗಳನ್ನು ನೋಡನೋಡುತ್ತಿದ್ದಂತೆ ಪುಡಿ ಮಾಡಿದ್ದಾನೆ.
ನಿಮಿಷಕ್ಕೆ 118 ತೆಂಗಿನಕಾಯಿಯನ್ನು ಬರಿಗೈಯಿಂದ ಒಡೆದು ಜರ್ಮನಿಯ ಮುಹಮದ್ ಕಹ್ರಮಾನೋವಿಕ್ ಎಂಬಾತ ಗಿನ್ನೆಸ್ ದಾಖಲೆ ನಿರ್ಮಿಸಿದ್ದ. ಅದನ್ನು ಕೇರಳದ ಡೊಮಾನಿಕ್ ಮುರಿದಿದ್ದಾರೆ. ಗಿನ್ನೆಸ್ ಪುಸ್ತಕದಲ್ಲಿ ಆರು ತಿಂಗಳೊಳಗೆ ಡೊಮಾನಿಕ್ ಹೆಸರು ಸೇರ್ಪಡೆಯಾಗಲಿದೆ ಎಂದು ವರದಿಗಳು ತಿಳಿಸಿವೆ.