ಕೇರಳದ ಪತ್ರಕರ್ತರೊಬ್ಬರು ತಮ್ಮ ಮಗಳ ಮದುವೆ ನಿಶ್ಚಿತಾರ್ಥ ರದ್ದು ಮಾಡಿ, ಆ ಹಣವನ್ನು ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ ದೇಣಿಗೆ ನೀಡಲಿದ್ದಾರೆ. ಸಿಪಿಎಂ ಮುಖವಾಣಿ ‘ದೇಶಾಭಿಮಾನಿ’ಯ ಸ್ಥಾನಿಕ ಸಂಪಾದಕ ಮನೋಜ್‌ ತಮ್ಮ ಮಗಳ ಭಾವೀ ಅಳಿಯನ ಕುಟುಂಬದ ಜೊತೆ ಮಾತನಾಡಿ, ಭಾನುವಾರ ಕಣ್ಣೂರಿನಲ್ಲಿ ನಡೆಯಲಿದ್ದ ನಿಶ್ಚಿತಾರ್ಥ ರದ್ದುಪಡಿಸಿ, ಆ ಹಣವನ್ನು ದೇಣಿಗೆ ನೀಡಲು ನಿರ್ಧರಿಸಿದ್ದಾರೆ.

ತಿರುವನಂತಪುರಂ(ಆ.18]: ಸತತ ಭೀಕರ ಮಳೆ, ಪ್ರವಾಹದಿಂದ ತತ್ತರಿಸಿರುವ ಕೇರಳಕ್ಕೆ ದೇಶಾದ್ಯಂತದಿಂದ ಸಾಕಷ್ಟು ನೆರವು ಹರಿದು ಬರುತ್ತಿದೆ. ಅಂತಹ ದೇಣಿಗೆಗಳಲ್ಲಿ ಕೆಲವೊಂದು ದೇಣಿಗೆಗಳ ಹಿಂದೆ ಮನಸ್ಸಿಗೆ ಆಪ್ತವೆನಿಸಿಸುವ, ಮಾನವೀಯ ಕತೆಗಳೂ ಇವೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಂಥದ್ದರಲ್ಲಿ ಕೇರಳದ ಪತ್ರಕರ್ತರೊಬ್ಬರು ತಮ್ಮ ಮಗಳ ಮದುವೆ ನಿಶ್ಚಿತಾರ್ಥ ರದ್ದು ಮಾಡಿ, ಆ ಹಣವನ್ನು ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ ದೇಣಿಗೆ ನೀಡಲಿದ್ದಾರೆ. ಸಿಪಿಎಂ ಮುಖವಾಣಿ ‘ದೇಶಾಭಿಮಾನಿ’ಯ ಸ್ಥಾನಿಕ ಸಂಪಾದಕ ಮನೋಜ್‌ ತಮ್ಮ ಮಗಳ ಭಾವೀ ಅಳಿಯನ ಕುಟುಂಬದ ಜೊತೆ ಮಾತನಾಡಿ, ಭಾನುವಾರ ಕಣ್ಣೂರಿನಲ್ಲಿ ನಡೆಯಲಿದ್ದ ನಿಶ್ಚಿತಾರ್ಥ ರದ್ದುಪಡಿಸಿ, ಆ ಹಣವನ್ನು ದೇಣಿಗೆ ನೀಡಲು ನಿರ್ಧರಿಸಿದ್ದಾರೆ.

ಒಟ್ಟಿನಲ್ಲಿ ಕೇರಳ ಪ್ರವಾಹ ಅಲ್ಲಿನ ಜನಜೀವನವನ್ನು ಅಕ್ಷರಶಃ ನಿರ್ಗತಿಕರೆನಿಸಿದೆ. ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಹಾಗೂ ಸಂಘಸಂಸ್ಥೆಗಳು ಕೇರಳ ನೆರವಿಗೆ ಧಾವಿಸುತ್ತಿದ್ದಾರೆ.