ಕೊಟ್ಟಾಯಮ್[ಸೆ.26]  ಮಾಥ್ಯೂ ಮನಾವತ್ ಬಿಜೆಪಿ ಸೇರುವ ವಿಚಾರವನ್ನು ಅಲ್ಲಗಳೆದಿದ್ದಾರೆ.  ಜನರು ಮತ್ತು ಮಾಧ್ಯಮಗಳು ಇಂಥ ಸುದ್ದಿಯ ಪೂರ್ವಾಪರ ತಿಳಿಯದೆ ಪ್ರಕಟ ಮಾಡಬಾರದು ಎಂದಿದ್ದಾರೆ.

ಕೇರಳದ ಪಾದ್ರಿಗಳು ಬಿಜೆಪಿ ಸೇರಿದ್ದಾರೆ ಎಂದು ಎಲ್ಲ ಮಾಧ್ಯಮಗಳಲ್ಲಿಯೂ ವರದಿಯಾಗಿತ್ತು.  ಮಾಥ್ಯೂ ಮನಾವತ್ , ಜಾಕೋಬ್ ಸಿರಿಯನ್ ಚರ್ಚ್ನ  ಗೀವರ್ಗೀಸ್, ಥಾಮಸ್ ಕುಲತುಂಕಲ್ ಬಿಜೆಪಿ ಸೇರಿದ್ದಾರೆ ಎನ್ನಲಾಗಿತ್ತು. ಇದಾದ ಮೇಲೆ ಬಿಜೆಪಿ ಸಹ ಮಾಥ್ಯೂ ಮನಾವತ್ ಅವರ ಹೆಸರನ್ನು ಫೇಸ್ ಬುಕ್ ನಿಂದ ತೆಗೆದು ಹಾಕಿದೆ.

ಒಟ್ಟಿನಲ್ಲಿ ಈ ಸುದ್ದಿ ಇವತ್ತಿನ ಮಟ್ಟಿಗೆ ಕೇರಳದಲ್ಲಿ ದೊಡ್ಡ  ವಿವಾದಕ್ಕೆ ಕಾರಣವಾಗಿತ್ತು. ನೆರೆಯಿಂದ ತತ್ತರಿಸಿದ್ದ ರಾಜ್ಯದಲ್ಲಿ ಇಂಥದ್ದೊಂದು ಸುದ್ದಿಯೂ ಉಹಾಪೋಹಗಳ ಪ್ರವಾಹ ಸೃಷ್ಟಿ ಮಾಡಿತ್ತು.