ಕೇರಳದಲ್ಲಿ ಆಗಸ್ಟ್ ವೇಳೆಗೆ ಮುಂಗಾರು ಅಬ್ಬರಿಸಲು ಆರಂಭಿಸಿದೆ. ಮಳೆ ರಭಸಕ್ಕೆ ರಸ್ತೆಯೇ ಕೊಚ್ಚಿ ಹೋಗಿದೆ. ರಸ್ತೆ ಕೊಟ್ಟಿ ಹೋಗುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ

ತಿರುವನಂತಪುರ (ಆ.9]  ಒಂದಷ್ಟು ದಿನಗಳ ಕಾಲ ಬಿಡುವು ನೀಡಿದ್ದ ಮುಂಗಾರು ಮಳೆ ಇದೀಗ ಮತ್ತೆ ತನ್ನ ಅಬ್ಬರವನ್ನು ಆರಂಭಿಸಿದೆ. ಕೇರಳದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದು, 21 ಮಂದಿ ಸಾವಿಗೀಡಾಗಿದ್ದಾರೆ. 35 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

 ಮೇಘ ಸ್ಪೋಟದ ರಭಸಕ್ಕೆ ರಸ್ತೆ ಮತ್ತು ಸೇತುವೆಗಳೆ ಕೊಚ್ಚಿ ಹೋಗುತ್ತಿವೆ. ಹಲವೆಡೆ ಭಾರೀ ಭೂ ಕುಸಿತ ಸಂಭವಿಸಿದೆ. ಮಲ್ಲಪುರಮ್ ಬಳಿ ರಸ್ತೆ ಕೊಚ್ಚಿ ಕೊಂಡು ಹೋಗಿದೆ. ಕಣ್ಣೂರಿನಲ್ಲಿ ಇಬ್ಬರು ವಯನಾಡು ಪ್ರದೇಶದಲ್ಲಿ ಓರ್ವ ವ್ಯಕ್ತಿ, ಕೋಚಿಕ್ಕೋಡ್, ಪಾಲಕ್ಕಾಡ್ ಗಳಲ್ಲಿಯೂ ಸಾವಿಗೀಡಾಗಿದ್ದಾರೆ. 

ವಯನಾಡು ಹಾಗೂ ಕೋಜಿಕೋಡ್ ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದು ಪ್ರವಾಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.

Scroll to load tweet…