ಕೇರಳ ಹಾಗೂ ಕರ್ನಾಟಕ ಪ್ರವಾಹದಿಂದ ತತ್ತರಿಸಿದೆ. ಭಾರೀ ಮಳೆಯಿಂದ ಉಂಟಾದ ಪ್ರವಾಹದಲ್ಲಿ ಅನೇಕ ಜನರು ಸಖಷ್ಟಕ್ಕೆ ಸಿಲುಕಿದ್ದ ಇವರಿಗೆ ನೆರವಾಗುವ ನಿಟ್ಟಿನಲ್ಲಿ ನಟ ರಾಜೀವ್ ಪಿಳ್ಳೈ ತಮ್ಮ ಮದುವೆಯನ್ನು ಮುಂದೂಡಿದ್ದಾರೆ.
ತಿರುವನಂತಪುರಂ : ಶತಮಾನದಲ್ಲೇ ಅತ್ಯಂತ ಭೀಕರ ಮಳೆ, ಪ್ರವಾಹ ಹಾಗೂ ಭೂಕುಸಿತದಿಂದ ನಲುಗಿರುವ ಕೇರಳ ಸಹಜಸ್ಥಿತಿಗೆ ಮರಳಲು ಹಲವು ವರ್ಷಗಳೇ ಬೇಕಾಗಬಹುದು ಎಂದು ಹೇಳಲಾಗಿದೆ.
ಪ್ರವಾಹ ಪೀಡಿತರಿಗೆ ನೆರವಾಗುವ ನಿಟ್ಟಿನಲ್ಲಿ ಮಲೆಯಾಳಂ ನಟ ರಾಜೀವ ಪಿಳ್ಳೈ ತಮ್ಮ ಮದುವೆಯನ್ನು ಮುಂದೂಡಿದ್ದಾರೆ. ಈ ವಿಷಯವನ್ನು ನಟಿ ಶಕೀಲಾ ಜೀವನ ಆಧರಿಸಿ ನಿರ್ಮಿಸುತ್ತಿರುವ ಮಲೆಯಾಳಂ ಚಿತ್ರ ಶಕೀಲಾರ ಸಹನಟಿ, ಖ್ಯಾತ ತಾರೆ ರೀಟಾ ಚಡ್ಡಾ ಪ್ರಕಟಿಸಿದ್ದಾರೆ.
ನೈಸರ್ಗಿಕ ವಿಕೋಪದಿಂದ 10 ಸಾವಿರ ಕಿ.ಮೀ. ಉದ್ದದ ಹೆದ್ದಾರಿ ಹಾಗೂ ರಸ್ತೆಗಳು ನಾಶವಾಗಿವೆ. ಸೇತುವೆಗಳು ಕೊಚ್ಚಿಕೊಂಡು ಹೋಗಿವೆ. ನಾಗರಿಕರ ಮನೆಗಳೂ ಸೇರಿದಂತೆ 1 ಲಕ್ಷ ಕಟ್ಟಡಗಳಿಗೆ ಹಾನಿಯಾಗಿದೆ. ಲಕ್ಷಾಂತರ ಹೆಕ್ಟೇರ್‌ನಲ್ಲಿ ಬೆಳೆದು ನಿಂತಿದ್ದ ಬೆಳೆ ಸರ್ವನಾಶವಾಗಿದೆ. ಹೀಗಾಗಿ 20 ಸಾವಿರ ಕೋಟಿ ರು.ಗಿಂತ ಅಧಿಕ ಹಾನಿ ಉಂಟಾಗಿರಬಹುದು ಎಂದು ಸರ್ಕಾರ ಅಂದಾಜಿಸಲಾಗಿದೆ.
