ವೈರಲ್ ಆದ ಶಾಸಕಿಯ ರಾಮಾಯಣ ವಾಚನ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 23, Jul 2018, 3:00 PM IST
Kerala CPM MLA's Ramayana recital hit on Facebook
Highlights

  • ಯು.ಪ್ರತಿಭಾ ಹರಿ ರಾಮಯಣ ಪಠಿಸುತ್ತಿದ್ದ ಶಾಸಕಿ
  • 132,107 ಮಂದಿ ವೀಕ್ಷಣೆ, ಸಾವಿರಾರು ಮಂದಿಯಿಂದ ಶೇರ್   

ತಿರುವನಂತಪುರ[ಜು.23]: ಸಾಮಾನ್ಯವಾಗಿ ಎಡಪಂಥೀಯ ವಿಚಾರಧಾರೆಯುಳ್ಳವರು ಲೆನಿನ್, ಮಾರ್ಕ್ಸ್ ಮುಂತಾದ ಕಮ್ಯುನಿಸ್ಟ್ ಸಿದ್ಧಾಂತಗಳನ್ನು ಓದುವುದು ಸಾಮಾನ್ಯ. ಆದರೆ  ಸಿಪಿಎಂ ಶಾಸಕಿಯೊಬ್ಬರು ರಾಮಯಣ ವಾಚಿಸುತ್ತಿರುವ ದೃಶ್ಯ ವೈರಲ್ ಆಗಿದೆ.

ಕೇರಳದ ಕಯಮ್'ಕುಳಂ ಕ್ಷೇತ್ರದ ಶಾಸಕಿ ಯು.ಪ್ರತಿಭಾ ಹರಿ ಅವರು ರಾಮಾಯಣ ವಾಚಿಸುತ್ತಿದ್ದು ಫೇಸ್'ಬುಕ್, ಟ್ವಿಟರ್ ಮುಂತಾದ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಫೇಸ್'ಬುಕ್ ಈಕೆಯ ವಾಚನದ ದೃಶ್ಯವನ್ನು 132,107 ಮಂದಿ ವೀಕ್ಷಿಸಿದ್ದು ಸಾವಿರಾರು ಮಂದಿ ಶೇರ್ ಮಾಡಿದ್ದಾರೆ. 

ವರದಿಗಳ ಪ್ರಕಾರ ಸಿಪಿಎಂ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಸಕಿ ರಾಮಾಣ ವಾಚಿಸಿದ್ದಾರೆ ಎನ್ನಲಾಗಿದೆ. ಆದರೆ ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಿಪಿಎಂ, ವೈಯಕ್ತಿಕವಾಗಿ ಪಠಿಸಿದ್ದು ಪಕ್ಷಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದೆ. 

 

loader