Asianet Suvarna News Asianet Suvarna News

ಬೂರ್ಖಾ ಧರಿಸಿ ಪ್ರಸವ ಕೋಣೆಗೆ ಕಾಲಿಟ್ಟ ಪೊಲೀಸಪ್ಪ: ಮುಂದೇನಾಯ್ತು?

ಬೂರ್ಖಾ ಧರಿಸಿ ಪ್ರಸವ ಕೋಣೆಗೆ ನುಗ್ಗಿದ ಪೊಲೀಸ್ ಅಧಿಕಾರಿ! ಇಡುಕಿಯ ಅಲ್ ಅಶರ್ ಮೆಡಿಕಲ್ ಕಾಲೇಜಿನಲ್ಲಿ ಘಟನೆ! ಗುಪ್ತವಾಗಿ ಅಲ್ಲಿನ ಚಟುವಟಿಕೆಗಳನ್ನು ಗಮನಿಸುತ್ತಿದ್ದ ನೂರ್ ಸಮೀರ್! ಪೊಲೀಸಪ್ಪನ ಪೋಲಿ ಆಟ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆ! ಭದ್ರತಾ ಸಿಬ್ಬಂದಿ ಕೈಯಿಂದ ತಪ್ಪಿಸಿಕೊಂಡು ಪರಾರಿಯಾದ ಅಧಿಕಾರಿ
 

Kerala Cop suspended for allegedly enter in labour ward wearing burqa
Author
Bengaluru, First Published Sep 30, 2018, 2:54 PM IST
  • Facebook
  • Twitter
  • Whatsapp

ತಿರುವನಂತಪುರಂ(ಸೆ.30): ಬೂರ್ಖಾ ಧರಿಸಿ ಆಸ್ಪತ್ರೆಯ ಪ್ರಸವ ಕೋಣೆಯೊಳಗೆ ನುಗ್ಗಿದ ಪೊಲೀಸ್ ಅಧಿಕಾರಿಯೋರ್ವನನ್ನು ಕರ್ತವ್ಯದಿಂದ ವಜಾಗೊಳಿಸಿದ ಘಟನೆ ಕೇರಳದ ಇಡುಕಿಯಲ್ಲಿ ನಡೆದಿದೆ. 

ಇಲ್ಲಿನ ಅಲ್ ಅಶರ್ ಮೆಡಿಕಲ್ ಕಾಲೇಜಿನ ಪ್ರಸವ ಕೋಣೆಗೆ ನುಗ್ಗಿದ ಪೊಲೀಸ್ ಅಧಿಕಾರಿ ನೂರ್ ಸಮೀರ್ ಗುಪ್ತವಾಗಿ ಅಲ್ಲಿನ ಚಟುವಟಿಕೆಗಳನ್ನು ಗಮನಿಸುತ್ತಿದ್ದ ಎನ್ನಲಾಗಿದೆ. ನೂರ್ ಸಮೀರ್ ಬೂರ್ಖಾ ಧರಿಸಿ ಪ್ರಸವ ಕೋಣೆಯೊಳಗೆ ಹೋದ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಕೂಡಲೇ ಆಸ್ಪತ್ರೆ ಸಿಬ್ಬಂದಿ ಆತನನ್ನು ಹಿಡಿದಿದ್ದಾರೆ.

ಆದರೆ ಭದ್ರತಾ ಸಿಬ್ಬಂದಿಯಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದ ನೂರ್ ಸಮೀರ್, ಕ್ಷಣಾರ್ಧದಲ್ಲಿ ಆಸ್ಪತ್ರೆ ಆವರಣದಿಂದ ಮಾಯವಾಗಿದ್ದಾನೆ. ಕೂಡಲೇ ಪೊಲೀಸರಿಗೆ ಮಾಹಿತಿ ರವಾನಿಸಲಾಗಿದ್ದು, ಬುರ್ಖಾ ಧರಿಸಿದ ವ್ಯಕ್ತಿ ಕುಲ್ಮಾವು ಪೊಲೀಸ್ ಠಾಣೆಯ ಅಧಿಕಾರಿ ಎಂಬುದು ಖಚಿತವಾಗಿದೆ.

ನೂರ್ ಸಮೀರ್ ವಿರುದ್ಧ ಈ ಹಿಂದೆಯೂ ಹಲವು ಆರೋಪಗಳು ಕೇಳಿ ಬಂದಿದ್ದು, ಡ್ರಗ್ಸ್ ಮಾರಾಟದ ಆರೋಪಿಯೋರ್ವನಿಂದ ಲಂಚ ಪಡೆಯುತ್ತಿದ್ದ ಆರೋಪದ ಮೇಲೆ ಆತನನ್ನು ಬಂಧಿಸಲಾಗಿತ್ತು.

Follow Us:
Download App:
  • android
  • ios