ಕಾಂಗ್ರೆಸ್ ಕಚೇರಿ ಆನ್ ಲೈನ್ ನಲ್ಲಿ ಮಾರಾಟಕ್ಕಿದೆ!

First Published 10, Jun 2018, 8:32 PM IST
Kerala Congress Office 'For Sale' on online: Drama Over Rajya Sabha Seat
Highlights

ಕೇರಳದ ಪ್ರದೇಶ ಕಾಂಗ್ರೆಸ್ ಕಚೇರಿ ಆನ್ಲೈನ್ ನಲ್ಲಿ ಮಾರಾಟಕ್ಕಿದೆ. ಅದು ಕೇವಲ 10 ಸಾವಿರ ರೂಪಾಯಿಗೆ ಮಾತ್ರ! ಕೇರಳದ ಕಾಂಗ್ರೆಸ್ ನಡಾವಳಿಗಳಿಂದ ಮನನೊಂದ ವ್ಯಕ್ತಿಯೊಬ್ಬ ಅಲ್ಲಿಯ ಪ್ರದೇಶ ಕಾಂಗ್ರೆಸ್ ಕಚೇರಿ ಇಂದಿರಾ ಭವನವನ್ನು ಮಾರಾಟಕ್ಕೆ ಇಟ್ಟಿದ್ದಾನೆ. ಆನ್ ಲೈನ್ ಮಾರಾಟತಾಣವೊಂದಕ್ಕೆ ಕಚೇರಿಯ ಸಂಪೂರ್ಣ ವಿವರ ಇರುವ ಮಾಹಿತಿ ಅಪ್ ಲೋಡ್ ಮಾಡಿದ್ದಾನೆ.

ತಿರುವನಂತಪುರಂ:  ಕೇರಳದ ಪ್ರದೇಶ ಕಾಂಗ್ರೆಸ್ ಕಚೇರಿ ಆನ್ ಲೈನ್ ನಲ್ಲಿ ಮಾರಾಟಕ್ಕಿದೆ. ಅದು ಕೇವಲ 10 ಸಾವಿರ ರೂಪಾಯಿಗೆ ಮಾತ್ರ! ಕೇರಳದಲ್ಲಿ ವಿಚಿತ್ರ ರಾಜಕಾರಣದ ಬೆಳವಣಿಗೆಗಳು ನಡೆಯುತ್ತಿದ್ದರೆ ಕಿಡಿಗೇಡಿಯೊಬ್ಬ ಅನೀಶ್ ಎಂಬ ಹೆಸರಿನಲ್ಲಿ ತಿರುವನಂತಪುರದ ಕೆಪಿಸಿಸಿ ಕಚೇರಿಯ ಚಿತ್ರವನ್ನು ಒಎಲ್ ಎಕ್ಸ್ ಗೆ ಅಪ್ ಲೋಡ್ ಮಾಡಿದ್ದು ದರ ಸಹ ನಿಗದಿ ಮಾಡಿದ್ದಾನೆ.

ಅಲ್ಲದೇ ಖರೀದಿ ಮಾಡಲು ಬಯಸುವವರು ಇಂಡಿಯನ್ ಯುನಿಯನ್ ಮುಸ್ಲೀಂ ಲೀಗ್ ನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾನೆ. ಕಚೇರಿಯ ಸುತ್ತಳತೆ ಸೇರಿದಂತೆ ಎಲ್ಲ ಮಾಹಿತಿಯನ್ನು ಅಪ್ ಲೋಡ್ ಮಾಡಲಾಗಿದೆ. ಕಿಡಿಗೇಡಿ ಮಾಡಿರುವ ಈ ಕೆಲಸಕ್ಕೆ ಕಾಂಗ್ರೆಸ್ ಕಚೇರಿ ಮಾರಾಟಕ್ಕೆ ಬಂದು ನಿಂತಿದ್ದು ಕೇರಳ ಕಾಂಗ್ರೆಸ್ ಇಲ್ಲಿಯವರೆಗೆ ಯಾವ ಪ್ರತಿಕ್ರಿಯೆ ನೀಡಿಲ್ಲ.
 
ಕೇರಳದಲ್ಲಿ ನಡೆಯುತ್ತಿರುವ ರಾಜಕಾರಣದ ಬದಲಾವಣೆಗಳೆ ಈ ಕೃತ್ಯಕ್ಕೆ ಕಾರಣ ಎನ್ನಲಾಗಿದೆ.  ಭಾರತ ರಾಷ್ಟ್ರೀಯ ಕಾಂಗ್ರೆಸ್ ರಾಜ್ಯಸಭಾ ಸ್ಥಾನವನ್ನು ಕೇರಳ ಕಾಂಗ್ರೆಸ್​(ಎಂ)ಗೆ ಬಿಟ್ಟುಕೊಟ್ಟಿತ್ತು. ಕೇರಳ ವಿಧಾನಸಭೆ ಚುನಾವಣಾ ಸೋಲಿಗೆ ಕಾಂಗ್ರೆಸ್​ ಕಾರಣ ಎಂದು ಯುಡಿಎಫ್​ ಆರೋಪಿದಕ್ಕೆ ಯುಡಿಎಫ್​ ಮೈತ್ರಿ ತೊರೆದು  2016ರಲ್ಲಿ ಕಾಂಗ್ರೆಸ್​ ಹೊರ ಬಂದಿತ್ತು. ಆದರೆ ಇದೀಗ ಮತ್ತೆ ಕಾಂಗ್ರೆಸ್ ಯುಡಿಎಫ್ ನೊಂದಿಗೆ ಸೇರಲು ಸಿದ್ಧತೆ ಮಾಡಿಕೊಂಡಿದೆ. ಕಾಂಗ್ರೆಸ್ ನ ಈ ದಿನಕ್ಕೊಂದು ನಡತೆಯನ್ನು ಗಮನಿಸಿದ ಕಿಡಿಗೇಡಿ ಕಾಂಗ್ರೆಸ್  ಕಚೇರಿಯನ್ನೇ ಮಾರಾಟಕ್ಕೆ ಇಟ್ಟಿದ್ದಾನೆ.

loader