Asianet Suvarna News Asianet Suvarna News

ಬಂಡೀಪುರ ರಾತ್ರಿ ಸಂಚಾರಕ್ಕೆ ಮತ್ತೆ ಕೇರಳ ಸರ್ಕಾರ ಕ್ಯಾತೆ!

ಬಂಡೀಪುರದಲ್ಲಿ ರಾತ್ರಿ ವಾಹನ ಸಂಚಾರ ಪುನಾರಂಭ ಪರ ಭರ್ಜರಿ ಲಾಬಿ ನಡೆಸಿ ವಿಫಲವಾಗಿರುವ ಕೇರಳ ಈಗ ಮತ್ತೊಂದು ಪ್ರಸ್ತಾವ ಇಟ್ಟಿದೆ. ಕರ್ನಾಟಕದ ಮೈಸೂರು ಹಾಗೂ ಕೇರಳದ ವಯನಾಡು ಜಿಲ್ಲೆಗಳನ್ನು ಬೆಸೆಯುವ ಬಂಡೀಪುರದಲ್ಲಿ ಎಲೆವೇಟೆಡ್‌ ಹೆದ್ದಾರಿ ನಿರ್ಮಾಣ ಪ್ರಸ್ತಾಪವನ್ನು ಮತ್ತೆ ಮಂಡಿಸಿದೆ. 

Kerala CM Pinarayi bats for elevated wayanad Mysore highway over Bandipur Tiger Park
Author
Bengaluru, First Published Aug 25, 2019, 11:05 AM IST

ತಿರುವನಂತಪುರಂ (ಆ. 25): ಬಂಡೀಪುರದಲ್ಲಿ ರಾತ್ರಿ ವಾಹನ ಸಂಚಾರ ಪುನಾರಂಭ ಪರ ಭರ್ಜರಿ ಲಾಬಿ ನಡೆಸಿ ವಿಫಲವಾಗಿರುವ ಕೇರಳ ಈಗ ಮತ್ತೊಂದು ಪ್ರಸ್ತಾವ ಇಟ್ಟಿದೆ. ಕರ್ನಾಟಕದ ಮೈಸೂರು ಹಾಗೂ ಕೇರಳದ ವಯನಾಡು ಜಿಲ್ಲೆಗಳನ್ನು ಬೆಸೆಯುವ ಬಂಡೀಪುರದಲ್ಲಿ ಎಲೆವೇಟೆಡ್‌ ಹೆದ್ದಾರಿ ನಿರ್ಮಾಣ ಪ್ರಸ್ತಾಪವನ್ನು ಮತ್ತೆ ಮಂಡಿಸಿದೆ.

ಯೋಜನೆಗೆ ಆಗುವ ವೆಚ್ಚದಲ್ಲಿ ಅರ್ಧದಷ್ಟನ್ನು ಭರಿಸುವುದಾಗಿ ಹೇಳಿದೆ. ಈ ಸಂಬಂಧ ಕೇಂದ್ರ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಖಾತೆ ಸಚಿವ ಪ್ರಕಾಶ್‌ ಜಾವಡೇಕರ್‌ ಅವರಿಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಪತ್ರ ಬರೆದಿದ್ದಾರೆ. ಕೇಂದ್ರ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯಕ್ಕೆ ಈ ಪ್ರಸ್ತಾವದ ಒಪ್ಪಿಗೆ ಇದೆ ಎಂದೂ ಹೇಳಿದ್ದಾರೆ.

ವನ್ಯಜೀವಿಗಳಿಗೆ ತೊಂದರೆಯಾಗಬಹುದು ಎಂಬ ಕಾರಣಕ್ಕೆ ರಾತ್ರಿ 9ರಿಂದ ಬೆಳಗ್ಗೆ 6ರವರೆಗೆ ಬಂಡೀಪುರ ಹೆದ್ದಾರಿಯನ್ನು ಬಂದ್‌ ಮಾಡಿಕೊಂಡು ಬರಲಾಗಿದೆ. ಇದರಿಂದ ಕೇರಳದ ವಯನಾಡು, ಕೋಳಿಕ್ಕೋಡ್‌ ಹಾಗೂ ಮಲ್ಲಪುರಂ ಜಿಲ್ಲೆಗಳಿಗೆ ಸಮಸ್ಯೆಯಾಗಿದೆ.

ಬಂಡೀಪುರಕ್ಕೆ ಪರಾರ‍ಯಯವಾಗಿ ಸೂಚಿಸಿರುವ ಮತ್ತೊಂದು ಹೆದ್ದಾರಿ 40 ಕಿ.ಮೀ.ನಷ್ಟುದೂರವಾಗುತ್ತದೆ. ಅದು ಕೂಡ ಮೀಸಲು ಅರಣ್ಯದಲ್ಲೇ ಹಾದು ಹೋಗುತ್ತದೆ ಎಂಬ ವಾದ ಕೇರಳದ್ದಾಗಿದೆ.

Follow Us:
Download App:
  • android
  • ios