ಅನಾರೋಗ್ಯ ದಿಂದ ಬಳಲುತ್ತಿರುವ ಕೇರಳ ಸಿಎಂ ಪಿಣರಾಯಿ ವಿಜಯನ್, ಹೆಚ್ಚಿನ ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಿದ್ದಾರೆ. ಶತಮಾನದಲ್ಲಿ ಕಂಡುಕೇಳರಿಯದ ಪ್ರವಾಹ ಉಂಟಾದ ಹಿನ್ನೆಲೆಯಲ್ಲಿ ಅವರು ತಮ್ಮ ಅಮೆರಿಕ ಭೇಟಿ ಮುಂದೂಡಿದ್ದರು. ಆದರೆ ಇದೀಗ ಅವರು ಅಮೆರಿಕಾಗೆ ತೆರಳಿದ್ದಾರೆ. 

ತಿರುವನಂತಪುರ: ಪ್ರವಾಹದಿಂದ ನಲುಗಿದ್ದ ರಾಜ್ಯದಲ್ಲಿ ಜನಜೀವನ ಸಹಜಸ್ಥಿತಿಗೆ ಮರಳುತ್ತಿರುವ ಹಿನ್ನೆಲೆ ಯಲ್ಲಿ, ಅನಾರೋಗ್ಯ ದಿಂದ ಬಳಲುತ್ತಿರುವ ಕೇರಳ ಸಿಎಂ ಪಿಣರಾಯಿ ವಿಜಯನ್, ಹೆಚ್ಚಿನ ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಿದ್ದಾರೆ. 

ವಾಸ್ತವವಾಗಿ ವಿಜಯನ್ ಅವರು ಆ. 19ರಂದೇ ಅಮೆರಿಕಕ್ಕೆ ತೆರಳಬೇಕಿತ್ತು. ಆದರೆ ರಾಜ್ಯದಲ್ಲಿ ಏಕಾಏಕಿ ಭಾರೀ ಮಳೆಯಾಗಿ, ಶತಮಾನದಲ್ಲಿ ಕಂಡುಕೇಳರಿಯದ ಪ್ರವಾಹ ಉಂಟಾದ ಹಿನ್ನೆಲೆಯಲ್ಲಿ ಅವರು ತಮ್ಮ ಅಮೆರಿಕ ಭೇಟಿ ಮುಂದೂಡಿದ್ದರು. 

ವಿಜಯನ್, ಅಮೆರಿಕದ ಮೇಯೋ ಕ್ಲಿನಿಕ್‌ನಲ್ಲಿ 3 ವಾರ ಚಿಕಿತ್ಸೆ ಪಡೆದು ತವರಿಗೆ ಮರಳಲಿದ್ದಾರೆ. ಈ ನಡುವೆ, ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳುವ ಮುನ್ನ ರಾಜ್ಯಪಾಲ ಪಿ. ಸದಾಶಿವಂ ಅವರನ್ನು ಭೇಟಿಯಾದ ಸಿಎಂ ಪ್ರವಾಹ ಸಂತ್ರಸ್ತರ ಪುನರ್ವಸತಿ, ರಕ್ಷಣಾ ಕಾರ್ಯದ ಮಾಹಿತಿ ನೀಡಿದ್ದಾರೆ.