ಈ ಪ್ರಕರಣದ ಕುರಿತು ರಾಜ್ಯ ಸರ್ಕಾರ ತನಿಖೆಗೆ ಆದೇಶಿಸಿದೆ.

ತಿರುವನಂತಪುರ(ಮಾ.04): ಕೇರಳದ ಎಲ್‌'ಡಿಎಫ್‌ ಸರ್ಕಾರದ ಬಜೆಟ್‌ ಮಂಡನೆ ಶುಕ್ರವಾರ ಭಾರಿ ವಿವಾದಕ್ಕೀಡಾಗಿದೆ.

ಬಜೆಟ್‌ ಮಂಡನೆಯಾಗುವ ಮುನ್ನವೇ ಅದರಲ್ಲಿನ ಅಂಶಗಳು ಫೇಸ್‌'ಬುಕ್‌ನಲ್ಲಿ ಹರಿದಾಡಿವೆ. ಇದರ ನಡುವೆಯೇ, ವಿತ್ತ ಮಂತ್ರಿ ಥಾಮಸ್‌ ಐಸಾಕ್‌ ಅವರು ವಿಧಾನಸಭೆಯಲ್ಲಿ 3 ಗಂಟೆ ಸುದೀರ್ಘ ಬಜೆಟ್‌ ಅನ್ನು ಮುಗಿಸುವ ಹಂತದಲ್ಲಿ, ಕಾಂಗ್ರೆಸ್‌ ಸದಸ್ಯರು ಸೋರಿಕೆಯಾದ ಬಜೆಟ್‌ನ ಅಂಶಗಳನ್ನು ಓದಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ಬಳಿಕ ಸರ್ಕಾರದ ಪ್ರಮಾದ ಖಂಡಿಸಿ ಸಭಾತ್ಯಾಗ ಮಾಡಿದ್ದಾರೆ.
ಪ್ರಕರಣದ ಕುರಿತು ರಾಜ್ಯ ಸರ್ಕಾರ ತನಿಖೆಗೆ ಆದೇಶಿಸಿದೆ. ಮೂಲಗಳ ಪ್ರಕಾರ, ಸಚಿವ ಐಸಾಕ್‌ ಅವರ ಮಾಧ್ಯಮ ಕಾರ್ಯದರ್ಶಿ, ಪತ್ರಕರ್ತರಿಗೆ ಬಜೆಟ್‌ ಮಂಡನೆ ನಂತರ ಕಳಿಸಬೇಕಿದ್ದ ಮುಖ್ಯಾಂಶಗಳನ್ನು ಮಂಡನೆಗೆ ಮೊದಲೇ ಪ್ರಮಾದವಶಾತ್‌ ರವಾನಿಸಿದ್ದಾರೆ ಎನ್ನಲಾಗಿದೆ.